ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಥಣಿ : ಆರ್ಥಿಕತೆಯ ಬೆನ್ನೆಲುಬು ದ್ರಾಕ್ಷಿ ಬೆಳೆಗಾರರು; ಶ್ವೇತಾ ಹಾಡಕರ

ಅಥಣಿ : ವಿಜಯಪುರ ರಾಜ್ಯದಲ್ಲಿ ಅಥಣಿಯಲ್ಲಿಯೇ ಹೆಚ್ಚು ದ್ರಾಕ್ಷಿ ಬೆಳೆಯುತ್ತಿದ್ದು, ದೇಶದ ಆರ್ಥಿಕತೆಯ ಬೆನ್ನೆಲುಬು ಕೃಷಿ. ಆದರೆ, ಅಥಣಿಯ ಆರ್ಥಿಕತೆಯ ಬೆನ್ನೆಲುಬು ದಾಕ್ಷಿ ಬೆಳೆಗಾರರು ಎಂದು ತಾಲೂಕು ತೋಟಗಾರಿಕೆ ಅಧಿಕಾರಿ ಶ್ವೇತಾ ಹಾಡಕರ ಹೇಳಿದರು.

ಅಥಣಿ ತಾಲೂಕಿನ ತೆಲಸಂಗ ಗ್ರಾಮದಲ್ಲಿ ದ್ರಾಕ್ಷಿ ಬೆಳೆಗಾರರ ಸಂಘದಿಂದ ಭಾನುವಾರ ಹಮ್ಮಿಕೊಂಡಿದ್ದ. ಒಂದು ದಿನದ ದ್ರಾಕ್ಷಿ ವಿಚಾರ ಗೋಷ್ಠಿಯಲ್ಲಿ ಮಾತನಾಡಿ, ಹವಾಮಾನ ವೈಪರೀತ್ಯದಿಂದ 2 ವರ್ಷದಿಂದ ದ್ರಾಕ್ಷಿ ಬೆಳೆಯಿಂದ ನಷ್ಟವಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಶಿಬಿರ ಹಮ್ಮಿಕೊಂಡಿರುವುದು ಉತ್ತಮ ವಿಷಯ ಎಂದರು.

ಅನಂತರ ಮಣ್ಣು ವಿಜ್ಞಾನಿ ಡಾ. ಪ್ರಸನ್ನ ಎಸ್. ಎಂ.ಮಾತನಾಡಿ ನಾಸಿಕ್ ಅಥವಾ ಅಮೇರಿಕದ ಕ್ಯಾಲಿಫೋರ್ನಿಯಾ ವ್ಯಾಲಿಗೆ ತುಲನೆ ಮಾಡುವಷ್ಟು ಫಲವತ್ತಾದ ಭೂಮಿ ನಿಮ್ಮದು. ಇದು ತೋಟಗಾರಿಕೆಗೆ ಹೇಳಿ ಮಾಡಿಸಿದ ಮಣ್ಣಾಗಿದೆ. ಮಣ್ಣಿನಲ್ಲಿ ಸಾವಯುವ ಇಂಗಾಲದ ಪ್ರಮಾಣ ಹೆಚ್ಚಿದ್ದರೆ ಯಾವುದೆ ಸಮಸ್ಯೆ ಬರುವುದಿಲ್ಲ ಎಂದು ತಿಳಿಸಿದರು.

ಈ ವೇಳೆ ಡಾ.ಸಿದ್ದಪ್ಪ ಥೋಕೆ, ಗ್ರಾಪಂ ಅಧ್ಯಕ್ಷ ವಿಲಾಸ್ ಮೋರೆ, ತೋಟಗಾರಿಕೆ ವಿಜ್ಞಾನಿಗಳ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕ ಎಸ್.ಐ.ಅಥಣಿ, ತೋಟಗಾರಿಕಾ ಅಧಿಕಾರಿ ಅಕ್ಷಯಕುಮಾರ ಉಪಾಧ್ಯಾಯ, ಸೇರಿದಂತೆ ಇತರರು ಉಪಸ್ಥಿತರಿದ್ದರು.

Edited By : Abhishek Kamoji
Kshetra Samachara

Kshetra Samachara

19/09/2022 06:10 pm

Cinque Terre

9.3 K

Cinque Terre

0

ಸಂಬಂಧಿತ ಸುದ್ದಿ