ಬೆಳಗಾವಿ: ಬ್ರೇಕ್ ಫೇಲ್ ಆಗಿ ಅರ್ಧಂಬರ್ಧ ನಿರ್ಮಾಣಗೊಂಡ ಕಟ್ಟಡಕ್ಕೆ ಖಾಸಗಿ ಬಸ್ಸೊಂದು ನುಗ್ಗಿರುವ ಘಟನೆ ಬೆಳ್ಳಂ ಬೆಳಗ್ಗೆ ಬೆಳಗಾವಿಯ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.
ನಗರದ ಪೊಲೀಸ್ ಇಲಾಖೆಗೆ ಸೇರಿದ ಕಟ್ಟಡಕ್ಕೆ ಈ ಖಾಸಗಿ ಬಸ್ ನುಗ್ಗಿದ್ದು, ಕಟ್ಟಡದ ಗೋಡೆ ಮತ್ತು ಬಸ್ ಮುಂಭಾಗ ಜಖಂ ಆಗಿದೆ. ಅದೃಷ್ಟವಶಾತ್ ಈ ಖಾಸಗಿ ಬಸ್‌ನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ, ಆದರೆ ಬ್ರೇಕ್ ಫೇಲ್ ಆಗಿರುವ ಕಾರಣ ಬಸ್ ಪೊಲೀಸ್ ಹೆಡ್ ಕ್ವಾರ್ಟರ್ಸ್ ಕಾಂಪೌಂಡ್‌ಗೆ ನುಗ್ಗಿ ಕಟ್ಟಡಕ್ಕೆ ಢಿಕ್ಕಿ ಹೊಡೆದಿದೆ.
PublicNext
03/10/2022 01:04 pm