ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ವಸತಿ ಕಾಲೇಜು ಕಟ್ಟಡದಿಂದ ಬಿದ್ದು ವಿದ್ಯಾರ್ಥಿನಿ ದಾರುಣ ಸಾವು

ಚಿಕ್ಕೋಡಿ: ಕಾಲೇಜು ವಿದ್ಯಾರ್ಥಿನಿಯೊಬ್ಬಳು ಮೊರಾರ್ಜಿ ವಸತಿ ಕಾಲೇಜು ಕಟ್ಟಡದಿಂದ ಬಿದ್ದು ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಹಿರೆಕೋಡಿಯಲ್ಲಿ ನಡೆದಿದೆ.

17 ವರ್ಷದ ಆಫ್ರಿನ್ ಜಾಮದಾರ್ ಮೃತ ವಿದ್ಯಾರ್ಥಿನಿ. ಇಂದು ಪರೀಕ್ಷೆ ಇದ್ದ ಕಾರಣಕ್ಕೆ ವಿದ್ಯಾರ್ಥಿನಿ ಮಧ್ಯರಾತ್ರಿವರೆಗೂ ವಸತಿ ನಿಲಯದ ಕಟ್ಟಡದಲ್ಲಿ ಓದುತ್ತಿದ್ದಳು. ಈ ವೇಳೆ ಮೊದಲ ಮಹಡಿಯಿಂದ ಆಯತಪ್ಪಿ ಬಿದ್ದು ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

Edited By : Vinayak Patil
PublicNext

PublicNext

22/10/2024 04:08 pm

Cinque Terre

11.24 K

Cinque Terre

0

ಸಂಬಂಧಿತ ಸುದ್ದಿ