ಬೆಂಗಳೂರು: ಹೆಚ್ಎಸ್ಆರ್ ಲೇಔಟ್ ನಲ್ಲಿ ಪಿಜ್ಜಾ ಹಟ್ ಸಿಬ್ಬಂದಿ ಪಿಜ್ಜಾ ತಯಾರು ಮಾಡಬೇಕಾದಾಗ ಕೈಯಲ್ಲಿ ಗ್ಲೌಸ್ ಇಲ್ಲದೇ, ತಲೆಗೆ ಹೆಡ್ ಕ್ಯಾಪ್ ಕೂಡ ಹಾಕದೇ ಬೇಜವಾಬ್ದಾರಿತನದಿಂದ ಪಿಜ್ಜಾ ರೆಡಿ ಮಾಡುತ್ತಿರುವ ವಿಡಿಯೋ ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ.
ಎಚ್ಎಸ್ಆರ್ ಲೇಔಟ್ ನಿವಾಸಿಯಾದ ಅಂಕಿತ್ ಕಳೆದ ಶುಕ್ರವಾರ ಎಚ್ಎಸ್ಆರ್ ಲೇಔಟ್ ನಲ್ಲಿ ಇದ್ದ ಪಿಜ್ಜಾ ಹಟ್ ನಲ್ಲಿ ಪಿಜ್ಜಾ ಆರ್ಡರ್ ಮಾಡಿದಾಗ ಸಿಬ್ಬಂದಿ ಬೇಜವಾಬ್ದಾರಿತನದಿಂದ ಪಿಜ್ಜಾ ರೆಡಿ ಮಾಡಿಕೊಡುತ್ತಿರುವ ವಿಡಿಯೋ ಮಾಡಿ ಸಾಮಾಜಿಕ ತಾಣದಲ್ಲಿ ಹರಿಬಿಟ್ಟಿದ್ದಾರೆ.
ಅಂಕಿತ್ ಎಷ್ಟು ಬಾರಿ ಸಿಬ್ಬಂದಿಗೆ ಕೈಯಲ್ಲಿ ಗ್ಲೌಸ್ ಹಾಕಿಕೊಂಡು ಪಿಜ್ಜಾ ರೆಡಿ ಮಾಡಿ ಅಂತ ಹೇಳಿದರೂ ಕೂಡ ಸಿಬ್ಬಂದಿ ಇವರ ಮಾತಿಗೆ ಬೆಲೆ ನೀಡದೇ ಹಾಗೆಯೇ ಬರಿಗೈನಲ್ಲಿ ಪಿಜ್ಜಾ ರೆಡಿ ಮಾಡಿದ್ದಾರೆ.
ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು.
PublicNext
30/07/2022 03:08 pm