ಬೆಂಗಳೂರು: ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಬದಲಾಗಿ ಮಹಾರಾಜ ಟ್ರೋಫಿ ನಡೆಸಲು ನಿರ್ಧರಿಸಿರುವ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯು ಪಂದ್ಯಾವಳಿಗೆ ಶ್ರೀರಾಮ್ ಕ್ಯಾಪಿಟಲ್ ಗ್ರೂಪ್ ಟೈಟಲ್ ಪ್ರಾಯೋಕತ್ವ ಪಡೆದಿದೆ.
ಕೆ.ಎಸ್.ಸಿ.ಎ ಅಧ್ಯಕ್ಷ ರೋಜರ್ ಬಿನ್ನಿ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಟೈಟಲ್ ಸ್ಪಾನ್ಸರ್ ಪಡೆದಿರುವ ಕ್ಯಾಪಿಟಲ್ ಗ್ರೂಪ್ ಹೆಸರನ್ನು ಅಧಿಕೃತವಾಗಿ ಘೋಷಿಸಿದರು. ಬಳಿಕ ಚುಟುಕಾಗಿ ಮಾತನಾಡಿದ ಅಧ್ಯಕ್ಷರು ಮೂರು ವರ್ಷಗಳ ಕಾಲ ಶ್ರೀರಾಮ್ ಗ್ರೂಪ್ ನಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿರುವುದು ಹರ್ಷ ತಂದಿದೆ ಎಂದರು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವಕ್ತಾರ ಖಜಾಂಚಿ ವಿನಯ್ ಮೃತ್ಯುಂಜಯ ಮಾತನಾಡಿ ಆಗಸ್ಟ್ 7ರಿಂದ 26ವರೆಗೂ ಮಹಾರಾಜ ಪಂದ್ಯಾವಳಿ ನಡೆಯಲಿದೆ. ಮೊದಲ ಪಂದ್ಯ ಮೈಸೂರಿನ ಶ್ರೀಕಂಠದತ್ತ ಒಡೆಯರ್ ಮೈದಾನದಲ್ಲಿ ಉದ್ಘಾಟನೆಯಾಗಲಿದೆ. ಫೈನಲ್ ಪಂದ್ಯ ರಾಜಧಾನಿಯ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ. ಕಪ್ ಗಾಗಿ ಒಟ್ಟು ಆರು ತಂಡಗಳ ಸೆಣಸಾಡಲಿವೆ. ಐಪಿಎಲ್ ಮಾದರಿಯಲ್ಲಿ ಕ್ವಾಲಿಫೈಯರ್ ಪಂದ್ಯಗಳು ನಡೆಯಲಿದೆ. ನಾಳೆ ಆಟಗಾರರ ಆ್ಯಕ್ಚನ್ ಬಿಡ್ ನಡೆಯಲಿದೆ ಎಂದು ಮಾಹಿತಿ ನೀಡಿದರು.
Kshetra Samachara
29/07/2022 07:23 pm