ಬೆಂಗಳೂರು : ಆತ್ಮರಕ್ಷಣೆಗಾಗಿ ಕರಾಟೆಯನ್ನ ಕಲಿಯಲಾಗುತ್ತದೆ, ಆತ್ಮರಕ್ಷಣೆಯ ಜೊತೆಗೆ ಕನ್ನಡವನ್ನ ಕಲಿಯುತ್ತಾರೆ ಈ ಕರಾಟೆ ಶಾಲೆಯಲ್ಲಿ, ಬಹುತೇಕ ಹೊರ ರಾಜ್ಯದ ಮಕ್ಕಳು ಕರಾಟೆಯನ್ನ ಕಲಿಯುತ್ತಿದ್ದು, ಅವರಿಗೆ ಕರಾಟೆ ಜೊತೆಗೆ ಕನ್ನಡದ ಸ್ವಾಧವನ್ನ ಸವಿಯುವ ಅವಕಾಶ ಮಾಡಿಕೊಟ್ಟಿದ್ದಾರೆ ಕರಾಟೆ ಕೋಚ್
ಯಲಹಂಕದ ಹಾರೋಹಳ್ಳಿಯಲ್ಲಿರುವ MLA ಮಾರ್ಷಲ್ ಆರ್ಟ್ ಮತ್ತು ಫಿಟ್ನೆಸ್ ಅಕಾಡೆಮಿ ಪ್ರಾರಂಭವಾಗಿ ಎರಡು ವರ್ಷವಾಗುತ್ತಿದೆ, ಈ ಶಾಲೆಯ ಸ್ಫಾಪಕರು ಮಾಜಿ ಯೋಧ ಮಾಲತೇಶ್ ರವರು, 20 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ನಂತರ ಈಗ ತಮ್ಮದೆ ಕರಾಟೆ ಶಾಲೆಯನ್ನ ತೆರೆಯುವ ಮೂಲಕ ಮಕ್ಕಳಿಗೆ ಆತ್ಮರಕ್ಷಣೆ ಕಲೆ ಮತ್ತು ಸದೃಢವಾದ ದೇಹವನ್ನ ಕಾಪಾಡಿಕೊಳ್ಳುವ ಬಗ್ಗೆ ತರಬೇತಿಯನ್ನ ನೀಡುತ್ತಿದ್ದಾರೆ.
ಈಗಾಗಲೇ ಇಲ್ಲಿನ ಮಕ್ಕಳು ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಪದಕ ಗೆದ್ದು ಸಾಧನೆಯನ್ನ ಮಾಡಿದ್ದಾರೆ. ಹೆಬ್ಬಾಳದಲ್ಲಿ ನಡೆದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ಭಾಗವಹಿಸಿದ 10 ಮಕ್ಕಳು ಚಿನ್ನದ ಸಾಧನೆಯನ್ನ ಮಾಡಿದ್ದಾರೆ. ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳನ್ನು ಗೌರವಿಸಲಾಗಿತು, ಕನ್ನಡಪರ ಹೋರಾಟಗಾರರಾದ ನಾಗೇನಹಳ್ಳಿ ಕೃಷ್ಣಮೂರ್ತಿಯವರು ಮಕ್ಕಳಿಗೆ ಕನ್ನಡ ಶಾಲನ್ನು ಹಾಕುವ ಮೂಲಕ ಗೌರವಿಸಿದರು.
MLA ಮಾರ್ಷಲ್ ಆರ್ಟ್ ಮತ್ತು ಫಿಟ್ನೆಸ್ ಅಕಾಡೆಮಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹೆಣ್ಣು ಮಕ್ಕಳು ಮಾರ್ಷಲ್ ಆರ್ಟ್ ಕಲಿಯುತ್ತಿದ್ದಾರೆ, ವಿಶೇಷವಾಗಿ ಪಂಜಾಬ್, ಗುಜರಾತ್, ಪಶ್ಕಿಮಬಂಗಾಳ ರಾಜ್ಯದ ಮಕ್ಕಳು ಇಲ್ಲಿನ ವಿದ್ಯಾರ್ಥಿಗಳು, ಕೆಲಸ ನಿಮಿತ್ತ ಬೆಂಗಳೂರಿಗೆ ಬಂದಿರುವ ಇವರು ಕನ್ನಡಿಗರಾಗಿದ್ದಾರೆ.
ತಮ್ಮ ಮಕ್ಕಳಿಗೆ ಕನ್ನಡ ಕಲಿಯುವ ಅವಕಾಶವನ್ನ ಮಾಡಿಕೊಟ್ಟಿದ್ದಾರೆ, ಮಕ್ಕಳು ಕರಾಟೆ ಕಲಿಯುವುದ ಜೊತೆಗೆ ಕನ್ನಡವನ್ನ ಕಲಿತು ಮಾತನಾಡುತ್ತಾರೆ, ಕನ್ನಡ ಕಲಿತ ಮಕ್ಕಳನ ಬಗ್ಗೆ ಪೋಷಕರು ಸಹ ಸಂತಸವನ್ನ ಹಂಚಿಕೊಂಡರು.
PublicNext
01/12/2024 06:00 pm