ಬೆಂಗಳೂರು: ನಿಬ್ಬೆರಗಾಗಿಸುವ ಆ ಫೈಟ್ ನೋಡ್ತಾ ಇದ್ರೆ ನಮಗೂ ಕೂಡ ಕಲಿಯುವ ಆಸಕ್ತಿ ಹೆಚ್ಚಾಗುತ್ತೆ. ಹೌದು, ಇದು ನಮ್ಮ ದೇಶದ ಆಟವಲ್ಲವಾದರೂ ಜಗತ್ರ್ಪಸಿದ್ಧ ಕ್ರೀಡೆ. ಅದು ಯಾವ ಆಟ ಅಂತೀರಾ ನೀವೇ ನೋಡಿ...
ಈ ದೃಶ್ಯಾವಳಿ ಕಂಡು ಬಂದಿದ್ದು, ಬೆಂಗಳೂರಿನ ಮಾರತಹಳ್ಳಿ ಬಳಿಯ ಕುಂದಲಹಳ್ಳಿಯಲ್ಲಿ. ಇದೊಂದು ಥೈಲ್ಯಾಂಡ್ ದೇಶದ ಆಟ. ಈ ಕ್ರೀಡೆಯನ್ನು ನಮ್ಮ ನೆಲದಲ್ಲಿ ಪರಿಚಯಿಸಲು ಕುಂದಲಹಳ್ಳಿಯ ಶಶಿ ಎಂಬವರು ಇಲ್ಲಿನ ಯುವಕ- ಯುವತಿಯರಿಗೆ ಕಲಿಸೋದಕ್ಕೆ ಈ ಒಂದು ಶಾಖೆಯನ್ನು ತಮ್ಮ ಮಾಲೀಕತ್ವದಲ್ಲಿ ಆರಂಭಿಸಿದ್ದಾರೆ.
ಇನ್ನು, ಈ ಶಶಿ ಸಹ ಈ ಆಟದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವು ಬಹುಮಾನ ಗೆದ್ದವರು.ʼಬೆಂಗಳೂರು ಫೈಟ್ ಕ್ಲಬ್ʼ ಹೆಸರಿನಲ್ಲಿ ಕುಂದಲಹಳ್ಳಿಯಲ್ಲಿಈ ಆಟದ ತರಬೇತಿ ಕೇಂದ್ರ ಆರಂಭಿಸಿದ್ದಾರೆ. ʼಮೈ ಥಾಯ್ʼ ಎಂಬ ಥೈಲ್ಯಾಂಡ್ ಫೈಟ್ ಇದಾಗಿದ್ದು, ಇದರಲ್ಲಿ 4 ರೀತಿಯ ಫೈಟ್‌ಗಳನ್ನು ಕಾಣಬಹುದು.
ಮೈ ಥಾಯ್, ಕಿಕ್ ಬಾಕ್ಸಿಂಗ್, ಮಿಕ್ಸ್ಡ್ ಮಾರ್ಷಲ್ ಆರ್ಟ್ಸ್, ಸೆಲ್ಫ್ ಡಿಫೆನ್ಸ್ ಹೀಗೆ ನಾನಾ ಫೈಟ್ಸ್ ನ್ನು ಇಲ್ಲಿ ಹೇಳಿ ಕೊಡಲಾಗುತ್ತೆ. ಇಂತಹ ಸ್ವಯಂ ರಕ್ಷಣಾ ಕಲೆಯನ್ನು ಕಲಿಸುವ ʼಬೆಂಗಳೂರು ಫೈಟ್ ಕ್ಲಬ್ʼನ 3ನೇ ಬ್ರಾಂಚನ್ನು ಶಶಿ ಕುಂದಲಹಳ್ಳಿಯಲ್ಲಿ ಆರಂಭಿಸಿದ್ದು, ಶಶಿಯವರ ತಾಯಿ ರೇಣುಕಮ್ಮ, ಸಮಾಜಸೇವಕರಾದ ಮುನ್ನೆಕೊಳಲ ವಿ. ಆನಂದ್, ರಾಜೇಶ್ ರೆಡ್ಡಿ ದೀಪ ಬೆಳಗಿಸಿ ಉದ್ಘಾಟಿಸಿದರು.
PublicNext
05/01/2022 07:35 am