ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್, ಕೆ.ಸಿ.ಉಮೇಶ್, ಬಿ.ಟಿ.ಮೋಹನ್, ಮಂಜುನಾಥ್ ಅವರ ಸ್ಮರಣಾರ್ಥವಾಗಿ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾವಳಿಗೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು...ಈಸ್ಟ್ ಹುಡುಗರ ವತಿಯಿಂದ ಕೆಆರ್ ಪುರದ ಐಟಿಐ ಗ್ರೌಂಡ್ ನಲ್ಲಿ ಆಯೋಜಿಸಿದ್ದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಸಚಿವ ಬೈರತಿ ಬಸವರಾಜ ಅವರು ಕ್ಷೇತ್ರದಲ್ಲಿ ಕ್ರೀಡಾಪಟುಗಳಿಗೆ ವಿಶೇಷ ಪ್ರೊತ್ಸಾಹ ನೀಡಲಾಗುತ್ತಿದ್ದು, ಇದೇ ತರ ಮುಂದೆಯೂ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಯುವಕರನ್ನು ಪ್ರೊತ್ಸಾಹಿಸುವುದಾಗಿ ತಿಳಿಸಿದರು.
ನಂತರ ಮಾತನಾಡಿದ ಈಸ್ಟ ಹುಡುಗರ ಸದಸ್ಯ ಉಮೇಶ ಅವರು ದೇಶದ ವಿವಿಧ ರಾಜ್ಯಗಳಿಂದ ಒಟ್ಟು ೧೬ ತಂಡಗಳು ಭಾಗವಹಿಸಿದ್ದು, ಕ್ರೀಡಾಂಗಣ ಸುತ್ತಲೂ ಪುನೀತ್ ಅವರ ಭಾವಚಿತ್ರಗಳನ್ನು ಹಾಕಲಾಗಿದೆ..ಅಷ್ಟೇ ಭಾಗವಹಿಸಿದ ತಂಡಗಳಿಂದ ಸಂಗ್ರಹವಾದ ಹಣದಲ್ಲಿ ಸಮಾಜಮುಖಿ ಕಾರ್ಯಕ್ಕಾಗಿ ಬಳಸಲಾಗುವುದು ಎಂದರು.
ಇನ್ನೂ ಫೈನಲ್ ಪಂದ್ಯದಲ್ಲಿ ವಿಜೇತವಾದ ತಂಡಕ್ಕೆ ಪ್ರಥಮ ಬಹುಮಾನ ೨ ಲಕ್ಷ ರೂಪಾಯಿ, ದ್ವೀತಿಯ ಸ್ಥಾನ ಪಡೆದ ತಂಡಕ್ಕೆ ೧ ಲಕ್ಷ ರೂಪಾಯಿ, ಹಾಗೂ ತೃತೀಯ ಬಹುಮಾನ ೫೦ ಸಾವಿರ ರೂಪಾಯಿಗಳನ್ನು ಗೆದ್ದ ತಂಡಗಳು ಪಡೆದುಕೊಳ್ಳಲಿವೆ.
Kshetra Samachara
04/12/2021 07:59 pm