ಬೆಂಗಳೂರು: ರೋಯಿಂಗ್ ಎನ್ನುವ ಆಟ ಹೆಚ್ಚಾಗಿ ವಿದೇಶಗಳಲ್ಲೇ ಕಂಡುಬರುತ್ತದೆ. ಇದು ಒಂದು ಬಗೆಯ ರೇಸಿಂಗ್ ಆಟ ಈ ಆಟದಲ್ಲಿ ಒಂದು ಸಣ್ಣದಾದ ಬೋಟನ್ನು ಉಪಯೋಗಿಸಿ ಆಟ ಆಡಲಾಗುವುದು. ಈ ಆಟ ಬರಿ ವಿದೇಶಗಳಲ್ಲಿ ಅಲ್ಲದೆ ನಮ್ಮ ಭಾರತದಲ್ಲಿ ಕೂಡ ಇದೆ. ಅದರಲ್ಲೂ ಇದು ನಮ್ಮ ಬೆಂಗಳೂರಿನಲ್ಲಿ ಕಾಣಬಹುದು. ಈ ಆಟದ ಅಭ್ಯಾಸ ನಮ್ಮ ಬೆಂಗಳೂರಿನ ಮಡಿವಾಳ ಕೆರೆಯಲ್ಲಿ ನಡೆಯುತ್ತಿದೆ.
ಇವರ ಹೆಸರು ಕೋಮಲ, ಇವರ ವಯಸ್ಸು 18 ವರ್ಷ. ಕೋಮಲ ಅವರು ಹಲವಾರು ವರ್ಷಗಳಿಂದ ರೋಯಿಂಗ್ ಆಟದಲ್ಲಿ ಸಾಧನೆ ಮಾಡಿದ್ದಾರೆ. ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಹಲವಾರು ಗೋಲ್ಡ್ ಮತ್ತು ಸಿಲ್ವರ್ ಮೆಡಲ್ ಗೆದ್ದಿದ್ದಾರೆ. ಕೋಮಲ ಅವರು ಈಗ ಜಮ್ಮು-ಕಾಶ್ಮೀರ್‌ನಲ್ಲಿ ನಡೆಯುವ 23ರ ಸಬ್ ಜೂನಿಯರ್ ಅಂಡ್ ಫಿಫ್ತ್ ಇಂಟರ್‌ಸ್ಟೇಟ್ ಚಾಲೆಂಜರ್ ಸ್ಪ್ರಿಂಟ್ ನ್ಯಾಷನಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದಿಂದ ಪಾಲ್ಗೊಳ್ಳುತ್ತಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುವ ಚಾಂಪಿಯನ್‌ಶಿಪ್‌ಗೆ ಕೋಮಲ ಅವರು ಮಾಡುತ್ತಿರುವ ತಯಾರಿ ಹೇಗಿದೆ ಎಂದು ನಮ್ಮ ಪ್ರತಿನಿಧಿ ನವೀನ್ ಮಡಿವಾಳ ಕೆರೆಯಿಂದ ನೀಡಿರುವಂತಹ ಪ್ರತ್ಯಕ್ಷ ವರದಿ ಇಲ್ಲಿದೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
03/06/2022 10:34 pm