ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೊಡ್ಡಜಾಲ ಮುತ್ಯಾಲಮ್ಮ ಜಾತ್ರೆಗೆ 14 ಹಳ್ಳಿಗಳ ಭಕ್ತ ಸಾಗರ!

ಯಲಹಂಕ: ಇಂದಿನ‌ ಮೊಬೈಲ್ ಇಂಟರ್ನೆಟ್ OTT ಅಬ್ಬರದ ಕಾಲದಲ್ಲೂ ಗ್ರಾಮೀಣ ಸೊಗಡಿನ ಹಳ್ಳಿ, ಜನ, ದೇವರು, ಕಳಶ-ದೀಪ, ಜಾತ್ರೆ, ಜಾನಪದ ಕಲಾತಂಡಗಳ ಅಬ್ಬರ‌ ಕಣ್ತುಂಬಿಕೊಳ್ಳುವುದು ಆನಂದದ ಕೆಲಸ. ಇಂತಹ ಸ್ವಚ್ಛಂದ ಸಂಭ್ರಮ‌- ಸಡಗರಕ್ಕೆ ದೊಡ್ಡಜಾಲ ಸಾಕ್ಷಿಯಾಗಿತ್ತು. ಕೊರೊನಾ ಹಿನ್ನೆಲೆ‌ ಬ್ರೇಕ್ ತೆಗೆದುಕೊಂಡಿದ್ದ ದೊಡ್ಡಜಾಲದ ಶ್ರೀ ಮುತ್ಯಾಲಮ್ಮ ಜಾತ್ರೆಗೆ 14 ಹಳ್ಳಿಗಳ 20 ಸಾವಿರ ಭಕ್ತರು ಜಮಾವಣೆಯಾಗಿ ಭಕ್ತಿಸಾಗರದಲ್ಲಿ ತೇಲಾಡಿದರು.

ದೊಡ್ಡಜಾಲ, ಬಂಡಿಕೊಡಿಗೇ ಹಳ್ಳಿ, ಸೊಣ್ಣಪನಹಳ್ಳಿ ವ್ಯಾಪ್ತಿಯ 14 ಹಳ್ಳಿ‌ ಜನ ವಿಜೃಂಭಣೆಯಿಂದ ಜಾತ್ರೆ ಆಚರಿಸಿದರು. ಮೊದಲು ವರ್ಷಕ್ಕೊಮ್ಮೆ ಆಚರಿಸಲಾಗ್ತಿದ್ದ ಜಾತ್ರೆ ದೇವಾಲಯದ ಕಾಮಗಾರಿ ಮುಗಿದ ನಂತರ 3 ವರ್ಷಕ್ಕೊಮ್ಮೆ ಆಚರಿಸಲಾಗ್ತಿದೆ. 14 ಹಳ್ಳಿಗಳಲ್ಲಿ 10 ಹಳ್ಳಿಗಳ 10 ತೇರು, ಜಾನಪದ ಕಲಾತಂಡ ಕಣ್ಮನ ಸೆಳೆಯಿತು. ಮಹಿಳೆಯರು ಬರಿಗಾಲಲ್ಲಿ ನಿಷ್ಠೆಯಿಂದ ಹೊತ್ತುತಂದಿದ್ದ ನೂರಾರು ಕಳಶಗಳ ಚಿತ್ರಣ ಮನಮೋಹಕವಾಗಿತ್ತು. ಸ್ಥಳೀಯ ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡ ಜಾತ್ರೆಗೆ ಬಂದು ದೇವರ ದರ್ಶನ ಪಡೆದರು.

14 ಹಳ್ಳಿಗಳಿಂದ ಹೋಗಿ ಬೇರೆ ಬೇರೆ‌ ಕಡೆ ನೆಲೆಸಿರುವ ಎಲ್ಲರೂ 3 ವರ್ಷಕ್ಕೊಮ್ನೆ ನಡೆಯೊ ಜಾತ್ರೆಗೆ ಹಾಜರಾಗ್ತಾರೆ. ಶಕ್ತಿದೇವತೆ, ವನದೇವತೆ, ಮುಕ್ತಿದೇವತೆ ಶ್ರೀ ಮುತ್ಯಾಲಮ್ಮನಿಗೆ ಭಕ್ತಿಯಿಂದ ಬೇಡಿಕೊಂಡರೆ ಇಷ್ಟಾರ್ಥ ಈಡೇರುತ್ತವೆ ಎಂಬುದು ಈ ಸ್ಥಳದ ಮಹಿಮೆ.

- ಸುರೇಶ್ ಬಾಬು Public Next ಯಲಹಂಕ

Edited By :
PublicNext

PublicNext

06/05/2022 10:38 pm

Cinque Terre

41.46 K

Cinque Terre

1

ಸಂಬಂಧಿತ ಸುದ್ದಿ