ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕರ್ನಾಟಕ ರಾಜ್ಯ, ಪ್ರಾಣಿ ಪಕ್ಷಿ ದಾಸೋಹ ಸೇವಾ ಟ್ರಸ್ಟ್ ವತಿಯಿಂದ ನಿರಾಶ್ರಿತರಿಗೆ ಹೊದಿಕೆ ವಿತರಣೆ

ದೊಡ್ಡಬಳ್ಳಾಪುರ: ಕರ್ನಾಟಕ‌ ರಾಜ್ಯ ಪ್ರಾಣಿ ಪಕ್ಷಿ ದಾಸೋಹ ಸೇವಾ‌ ಟ್ರಸ್ಟ್ ವತಿಯಿಂದ ತಾಲೂಕಿನ ಎಸ್.ಎಸ್.ಘಾಟಿ ಕ್ಷೇತ್ರದಲ್ಲಿ ನಿರಾಶ್ರಿತ‌ರು ಹಾಗೂ ವೃದ್ಧರಿಗೆ ಹೊದಿಕೆ, ಆಹಾರ ಪೊಟ್ಟಣ ಹಾಗೂ ನೀರಿನ‌ ಬಾಟೆಲ್‌ ವಿತರಿಸಲಾಯಿತು. ಶ್ರೀಕ್ಷೇತ್ರ ಘಾಟಿ‌ಸುಬ್ರಹ್ಮಣ್ಯದಲ್ಲಿ ಭಾನುವಾರ ನೂರಕ್ಕೂ ಹೆಚ್ಚು ವಯೋವೃದ್ಧರಿಗೆ ಟ್ರಸ್ಟ್ ಪದಾಧಿಕಾರಿಗಳು ಆಹಾರ ವಿತರಿಸಿ ಸಾಮಾಜಿಕ ಕೈಂಕರ್ಯದಲ್ಲಿ ತೊಡಗಿದರು.

ಬಸ್ ನಿಲ್ದಾಣ, ದೇವಸ್ಥಾನ ಮುಂಭಾಗ ಹಾಗೂ ರಸ್ತೆ ಬದಿ ಕುಳಿತಿದ್ದ ನಿರಾಶ್ರಿತರು ಹಾಗೂ ವೃದ್ಧರಿಗೆ ಆಹಾರ ಪೊಟ್ಟಣ, ಹೊದಿಕೆ ಕೊಟ್ಟರು.ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ರಾಮಕುಮಾರ್ ಮಾತನಾಡಿ, ನಗರದ ದೇವಸ್ಥಾನ, ಚರ್ಚ್ ಹಾಗೂ ಮಸೀದಿ ಸೇರಿದಂತೆ ಹಲವು ಸಾರ್ವಜನಿಕ ಸ್ಥಳಗಳಲ್ಲಿ ವೃದ್ಧರು ಹಾಗೂ ನಿರಾಶ್ರಿತರಿಗೆ ಆಹಾರ,ಹೊದಿಕೆ ವಿತರಿಸಲಾಗುತ್ತಿತ್ತು. ಈ ಸಲ ಘಾಟಿ ಕ್ಷೇತ್ರದಲ್ಲಿ ವೃದ್ಧರಿಗೆ ಆಹಾರ ನೀಡುವ ಮೂಲಕ ಹಸಿವು‌‌ ನೀಗಿಸುವ ಕೆಲಸ‌ ಮಾಡುತ್ತಿದ್ದೇವೆ. ಟ್ರಸ್ಟಿನ ಈ ಸೇವೆ ಇಂದಿನ ಯುವಪೀಳಿಗೆಗೆ ಮಾದರಿಯಾಗಲಿ ಎಂಬ ಆಶಯದೊಂದಿಗೆ ಸತ್ಕಾರ್ಯ‌ ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

25/07/2022 06:43 pm

Cinque Terre

2.4 K

Cinque Terre

0

ಸಂಬಂಧಿತ ಸುದ್ದಿ