ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಂಗ್ರೆಸ್ ನಡೆಯ ವಿರುದ್ಧ ಕಿಡಿಕಾರಿದ ಬೈರತಿ ಬಸವರಾಜ್

ಬೆಂಗಳೂರು: ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪೇಸಿಎಂ ಪೋಸ್ಟರ್ ಹಾಕಿರುವ ಕಾಂಗ್ರೆಸ್ ನಾಯಕರ ನಡೆಯನ್ನು ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ವಿರೋಧಿಸಿದ್ದಾರೆ. ಕೆಆರ್ ಪುರ‌ ಕ್ಷೇತ್ರದ ಕಲ್ಕೆರೆ ವಾರ್ಡನ ಕೆ.ಚನ್ನಸಂದ್ರ ಗ್ರಾಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಮುಖ್ಯಮಂತ್ರಿಗಳ ಕುರಿತು ದಾಖಲೆಗಳಿದ್ದಾರೆ ಬಿಡುಗಡೆಗೊಳಿಸಲಿ.

ಬಿಟ್ಟು ಸುಳ್ಳು ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪಕ್ಷದವರಿಗೆ ಮಾನ ಮರ್ಯಾದೆಯಿಲ್ಲದೆ ಹತಾಶೆ ಭಾವದಿಂದ ಈ ರೀತಿಯ ದೃಷ್ಕೃತ್ಯಗಳಿಗೆ ಕೈ ಹಾಕುತ್ತಿದ್ದಾರೆ ಎಂದು ಕಿಡಿಕಾರಿದರು. ಇನ್ನೂ ದಾಖಲೆಗಳು ಇದ್ದರೆ ಲೋಕಾಯುಕ್ತ, ನ್ಯಾಯಾಲಯಕ್ಕೆ ದೂರ ನೀಡಿ ಎಂದು ಸಚಿವರು ಆಗ್ರಹಿಸಿದ್ದಾರೆ.

Edited By : Nagaraj Tulugeri
PublicNext

PublicNext

25/09/2022 02:04 pm

Cinque Terre

21.47 K

Cinque Terre

0

ಸಂಬಂಧಿತ ಸುದ್ದಿ