ಬೆಂಗಳೂರು: ಸಚಿವ ಉಮೇಶ್ ಕತ್ತಿ, ವಿಧಾನ ಸಭೆಯ ಹಾಗೂ ಪರಿಷತ್ ಮಾಜಿ ಶಾಸಕ ಹಾಗೂ ಸಚಿ ಎಂ ರಘುಪತಿ, ಎಂ.ಡಿ.ರಮೇಶ್ ರಾಜು, ಕನ್ನಡ ಸುಗಮ ಸಂಗೀತ ಕ್ಷೇತ್ರದ ಗಾಯಕ ಶಿವಮೊಗ್ಗ ಸುಬ್ಬಣ್ಣ, ಭಾಷಾ ವಿಜ್ಞಾನಿ, ಸಾಹಿತಿ ಪ್ರೋ. ಕೋಡಿ ಕುಶಾಲಪ್ಪ ಗೌಡ, ಹಿರಿಯ ವೈದ್ಯ ಡಾ. ಗುರುರಾಜ ಹೆಬ್ಬಾರ್ ಹಾಗೂ ಸಂತೂರು ವಾದಕ ಪಂಡಿತ್ ಶಿವಕುಮಾರ್ ಶರ್ಮ ಅವರ ನಿಧನಕ್ಕೆ ವಿಧಾನಸಭೆ ಹಾಗೂ ವಿಧಾನ ಪರಿಷತ್‌ನಲ್ಲಿ ಪಕ್ಷಾತೀತವಾಗಿ ಸಂತಾಪ ಸೂಚಿಸಿದರು.
ಇನ್ನು ವಿಧಾನ ಪರಿಷತ್ ಸದನ ಆರಂಭವಾಗುವಂತೆ ಸಭಾಪತಿ ರಘುನಾಥ್ ಮಲ್ಕಾಪುರಿ ಅವರು ಇತ್ತೀಚಿಗೆ ನಿಧನರಾದ ಮಾಜಿ ಸಚಿವ ಉಮೇಶ್ ಕತ್ತಿ ಸೇರಿದಂತೆ ವಿವಿಧ ಗಣ್ಯರಿಗೆ ಸಂತಾಪ ಸೂಚಿಸಿದರು.
ಬಳಿಕ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಉಮೇಶ ಕತ್ತಿ ಅವರು ಜನರ ಮಧ್ಯ ಕಾರ್ಯ ನಿರ್ವಹಿಸಿದ ವ್ಯಕ್ತಿ, ಸ್ನೇಹ ಜೀವಿಯಾಗಿದ್ದರು, ಅವರ ನಿಧನ ಇಡೀ ರಾಜ್ಯಕ್ಕೆ ಸಂಕಟವಾಗುತ್ತಿದೆ. ಎಲ್ಲರ ಜೊತ ಅಭಿಮಾನ, ಎಲ್ಲಾ ಪಕ್ಷದವರನ್ನು ಒಂದೇ ರೀತಿ ನೋಡುತ್ತಿದ್ದರೂ, 8 ಭಾರಿ ಶಾಸಕರಾಗಿ ಆಯ್ಕೆ, ಒಂದು ಭಾರಿ ಸೋವು ಅನುಭವಿಸಿ,4 ಭಾರಿ ಸಚಿವರಾಗಿದ್ದಾರೆ ಸಾರ್ವಜನಿಕ ಜೀವನದಲ್ಲಿ ರಾಜಕೀಯದಲ್ಲಿ ಒಂದೇ ರೀತಿ ಬದುಕಿದ್ದರು, ತಂದೆ ಹೆಸರಿನಲ್ಲಿ ಟಸ್ಟಿ ಮಾಡಿ ಬಡವರಿಗೆ ಸಹಾಯ ಮಾಡುತ್ತಿದ್ದರು, ಕಂಡದನ್ನು ಕಂಡ ಹಾಗೆ ಹೇಳುತ್ತಿರುವ ವ್ಯಕ್ತಿಯಾಗಿರುವ ಅವರ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಇವರುಸೇರಿದಂತೆ ೬ ಮಂದಿ ಗಣ್ಯರಿಗೆ ಸಂತಾಪ ಮೀಡಿದರು.
ವಿರೋಧಿ ಪಕ್ಷ ನಾಯಕ ಬಿ.ಕೆ ಹರಿಪ್ರಸಾದ್, ಹಿರಿಯ ರಾಜಕಾರಣಿಯಾಗಿರುವ ಉಮೇಶ್ ಕತ್ತಿ ಅವರ ವಯಸ್ಸು 61 ವರ್ಷ ದವರಾಗಿದ್ದರು. ನೇರವಾಗಿ ಮಾತನಾಡುವ ವ್ಯಕ್ತಿತ್ವ, ಜನರ ಬಗ್ಗೆ ಅಪಾರ ಕಾಳಜಿ ಇಟ್ಟುಕೊಂಡು ಉತ್ತರ ಕರ್ನಾಟಕ ಏನಾದರೂ ಮಾಡಬೇಕು ಎನ್ನುವ ವ್ಯಕ್ತಿಯಾಗಿದ್ದರು ಎಂದರು.
ಹನುಮಂತ ನಿರಾಣಿ , ನಾಗರಾಜ್ ಯಾದವ್, ಟಿ ಎಸ್ ಶ್ರವಣ, ಬಸವರಾಜ್ ಹೊರಟ್ಟಿ, ಸಚಿವ ಗೋವಿಂದ ಕಾರಜೋಳ ಸೇರಿದಂತೆ ಹಲವರು ಸಂತಾಪ ಸೂಚಿಸಿದರು. ಬಳಿಕ ಒಂದು ಮೌನಾಚರಣೆ ನಡೆಸಿ ಸದನವನ್ನು ಸಭಾಪತಿ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಮುಂದುಡಿದರು.
Kshetra Samachara
12/09/2022 06:02 pm