ಬೆಂಗಳೂರು: ಇಷ್ಟು ದಿನ ಕಾಂಗ್ರೆಸ್ ಕಾರ್ಯಕರ್ತರು ಪ್ರಧಾನಿ ಮೋದಿ ಹತ್ತು ಲಕ್ಷ ಸೂಟ್ ಹಾಕ್ತಾರೆ, ಅವರು ತಿನ್ನೋ ಅನ್ನವೇ ಕೆಜಿಗೆ ನಲವತ್ತು ಸಾವಿರ ಅಂತೆಲ್ಲ ಚರ್ಚೆಮಾಡಿ ವೈರಲ್ ಮಾಡ್ತಿದ್ರು. ಇಂದು ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ಟೀ ಶರ್ಟ್ ಬೆಲೆ ಎಷ್ಟು ಅಂತ ಕೆದಕಿದ್ದಾರೆ. ಭಾರತ್ ಜೋಡೋ ಕಾರ್ಯಕ್ರಮ ಹಿನ್ನೆಲೆ ರಾಹುಲ್ ಧರಿಸಿದ್ದ ಟೀ ಶರ್ಟ್ ನಲವತ್ತು ಸಾವಿರಕ್ಕೂ ಅಧಿಕ ಅನ್ನೋದನ್ನ ಪತ್ತೆ ಮಾಡಿ ಭಾರತ್ ದೇಖೋ ಅಂತ ಟ್ರೋಲ್ ಮಾಡ್ತಿದ್ದಾರೆ.
ಇಷ್ಟೇ ಆಗಿದ್ರೆ ಪರವಾಗಿಲ್ಲ ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ನವರು ಬಿಎಸ್ ಯಡಿಯೂರಪ್ಪ ಪುತ್ರ ವಿಜಯೇಂದ್ರ ಹಾಕಿರೋ ಬೆಲ್ಟ್ ಬೆಲೆಯನ್ನ ಗೂಗಲ್ ನಲ್ಲಿ ಸರ್ಚ್ ಮಾಡಿದ್ದಾರೆ. ವಿಜಯೇಂದ್ರ ಆರವತ್ತ ಮೂರು ಸಾವಿರ ರೂ. ಬೆಲ್ಟ್ ಹಾಕಿದ್ದಾರೆ ಅಂತ ಪ್ರಚಾರ ಮಾಡ್ತಿದ್ದಾರೆ.
ಒಟ್ಟಿನಲ್ಲಿ ದೇಶದ ಜಿಡಿಪಿ, ರೈತರ ಕಷ್ಟ, ಬೆಲೆ ಏರಿಕೆ ಬಗ್ಗೆ ಚರ್ಚೆ ಮಾಡಬೇಕಾದ ಜನಪ್ರತಿನಿಧಿಗಳು, ಕಾರ್ಯಕರ್ತರು ನಾಯಕರು ಬಳಸೋ ಬಟ್ಟೆ ಬರೆ ಬಗ್ಗೆ ಚರ್ಚೆ ಮಾಡ್ತಿರೋದು ವಿರ್ಯಾಸವೇ ಸರಿ.
PublicNext
09/09/2022 11:58 pm