ಬೆಂಗಳೂರು: ಬಿಜೆಪಿ ಸರ್ಕಾರ ಹಿಂದೆ ಐದು ವರ್ಷ, ಈಗ ಮೂರು ವರ್ಷ, ಒಟ್ಟು ಎಂಟು ವರ್ಷದಲ್ಲಿ ಇಷ್ಟು ಅದ್ವಾನ ಮಾಡಿಟ್ಟಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ರಾಮಲಿಂಗ ರೆಡ್ಡಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಎಲ್ಲವೂ ಮಾರಿ ಹೋಗ್ತಾರೆ. ಸೇವಾ ವಲಯಗಳನ್ನು ಮಾರಾಟ ಮಾಡುತ್ತಿದ್ದಾರೆ. ಅಭಿವೃದ್ಧಿ ಮಾಡಲು 15 ಜನರನ್ನು ಗೆಲ್ಲಿಸಿದ್ದಾರೆ. ಒಬ್ಬ ಮಂತ್ರಿಯನ್ನು ಕಂಡರೇ ಇನ್ನೊಬ್ಬ ಮಂತ್ರಿಗೆ ಆಗಲ್ಲ. ಸಿಎಂ ಫ್ಲೈಯಿಂಗ್ ವಿಜಿಟ್ ಕೊಡ್ತಾರೆ. ಬೆಂಗಳೂರಿನಲ್ಲಿ ಫ್ಲೈಯಿಂಗ್ ವಿಜಿಟ್ ಕೊಟ್ಟರೆ ಆಗಿ ಬಿಡುತ್ತಾ? ಹಿಂದೆ ನಾನು ಮೂರು ಸಾರಿ ವಿಜಿಟ್ ಮಾಡುತ್ತಿದ್ದೆ. ಸಿದ್ದರಾಮಯ್ಯ ತಿಂಗಳಿಗೆ ಒಂದು ಸಾರಿಯಾದರೂ ವಿಜಿಟ್ ಮಾಡುತ್ತಿದ್ದರು. ಆದ್ರೆ ಈಗ ಮಳೆ ವಿಚಾರ ನಡೆದ ಸಭೆಯಲ್ಲಿ ಕಂದಾಯ ಸಚಿವ ಆರ್. ಅಶೋಕ್ ನಿದ್ದೆ ಜಾರಿದ್ದಾರೆ ಎಂದು ರಾಮಲಿಂಗಾರೆಡ್ಡಿ ಕಿಡಿ ಕಾರಿದ್ದಾರೆ.
ನಾವು ಕೆಲಸ ಮಾಡಿಯೇ ಮತ ತೊಗೊಬೇಕು. ಬಿಜೆಪಿಯವರು ಹಿಂದು- ಮುಸ್ಲಿಮರ ನಡುವೆ ಜಗಳ ತಂದು ಇಡ್ತಾರೆ. ಮೋದಿ ಮತ ಹಾಕಿಸುತ್ತಾರೆ ಎಂದು ಹೇಳ್ತಾರೆ. ಮತ ಹಾಕಿಸಿಕೊಳ್ಳಲು ಬೇರೆ ಬೇರೆ ದಾರಿಗಳಿವೆ. ಆದ್ದರಿಂದ ಬಿಜೆಪಿಯವರು ಕೆಲಸ ಮಾಡಲ್ಲ ಎಂದು ರಾಮಲಿಂಗ ರೆಡ್ಡಿ ಸರ್ಕಾರದ ವಿರುದ್ಧ ಕಿಡಿಕಾರಿದಾರೆ.
PublicNext
06/09/2022 04:37 pm