ವರದಿ- ಬಲರಾಮ್ ವಿ
ಬೆಂಗಳೂರು : ಮಹದೇವಪುರ ಕ್ಷೇತ್ರದ ಶಾಸಕ ಅರವಿಂದ ಲಿಂಬಾವಳಿ ಮಹಿಳೆಯ ಮೇಲೆ ತೋರಿದ ದರ್ಪಕ್ಕೆ ಮಹಿಳೆಯು ಪ್ರತಿಕ್ರಿಯಿಸಿದ್ದು, ಮಹಿಳಾ ಆಯೋಗಕ್ಕೆ ದೂರು ನೀಡಲು ಮುಂದಾಗಿದ್ದಾರೆ.
ಶುಕ್ರವಾರ ಕ್ಷೇತ್ರದ ವರ್ತೂರು ಕೋಡಿ ಬಳಿ ಮಳೆಯಿಂದಾಗಿ ಹಾನಿಗೊಳಗಾದ ಪ್ರದೇಶಗಳ ಪರಿವೀಕ್ಷಣೆ ವೇಳೆ ಶಾಸಕರಿಗೆ ಮನೆಯ ದಾಖಲೆ ಪತ್ರ ತೋರಿಸಲು ಬಂದಾಗ ಶಾಸಕರು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದೀಯಾ ? ಇಲ್ಲಿ ಬಂದು ಮಾತನಾಡುತ್ತೀಯಾ ಎಂದು ಗದರಿದ್ದಾರೆ. ನಾಚಿಕೆ ಅಗಲ್ವಾ ನಿಂಗೆ ? ಒತ್ತುವರಿ ಮಾಡಿರುವ ನಿಂಗೆ ಮರ್ಯಾದೆ ಬೇರೆ ಕೊಡಬೇಕಾ ? ಎಂದು ಮಹಿಳೆ ವಿರುದ್ಧ ಕೂಗಾಡಿದ್ದರು.
ಬಳಿಕ ಮಹಿಳೆಯನ್ನು ಪೊಲೀಸ್ ಸ್ಟೇಷನ್'ಗೆ ಕರೆದುಕೊಂಡು ಹೋಗುವಂತೆ ಪೊಲೀಸರಿಗೆ ಸೂಚಿಸುವ ಮೂಲಕ ಮಹಿಳೆಯನ್ನು ನಿಂದಿಸಿರುವ ವಿಚಾರವಾಗಿ ಇಂದು ನೊಂದ ಮಹಿಳೆಯು ಶಾಸಕರ ವಿರುದ್ಧ ದೂರ ನೀಡಲು ಮುಂದಾಗಿದ್ದಾರೆ.
ಶಾಸಕರ ವಿರುದ್ಧ ಯಾವುದೇ ವೈಯಕ್ತಿಕ ದ್ವೇಷವಿಲ್ಲ. ಅವರು ಯಾವ ಉದ್ದೇಶವಿಟ್ಟುಕೊಂಡು ಆ ರೀತಿ ನಡೆದುಕೊಂಡಿದ್ದರೋ ಗೊತ್ತಿಲ್ಲ. ಮನೆಯ ಕಾಂಪೌಂಡ್ ಹೊಡೆಯುವ ವೇಳೆ ಮನವಿ ಮಾಡಿದ್ದೆ, ಒತ್ತುವರಿ ಆಗಿದ್ದರೆ, ತಾವೇ ಜಾಗ ನೀಡುವುದಾಗಿ ಅದನ್ನು ಲೆಕ್ಕಿಸದೆ ಕಾಂಪೌಂಡ್ ಒಡೆಯಲು ಮುಂದಾಗಿದ್ದಾರೆ ಎಂದು ಮಹಿಳೆ ಆರೋಪಿಸಿದರು..
PublicNext
03/09/2022 06:39 pm