ಬೆಂಗಳೂರು: ಕಡಪ, ಆಂಧ್ರ, ತಮಿಳುನಾಡಿನಲ್ಲಿ ಮಠಗಳಿವೆ.ಇವತ್ತು ಸಿಎಂ ಭೇಟಿ ಮಾಡಿ ಮಠಕ್ಕೆ ಭೂಮಿಯನ್ನೂ ಕೊಡಬೇಕು, ಅನುದಾನವನ್ನು ಕೊಡಬೇಕು ಅಂತ ಮನವಿ ಸಲ್ಲಿಸಿದ್ದೇವೆ ಎಂದು ಮಾಜಿ ಕೇಂದ್ರ ಸಚಿವ ಮುನಿಯಪ್ಪ ಹೇಳಿದ್ದಾರೆ.
ಮಠ ಅಭಿವೃದ್ಧಿ ಆಗಬೇಕು, ಶೈಕ್ಷಣಿಕ ಸಂಸ್ಥೆ ಮಾಡಬೇಕು ಅಂತ ಸಿಎಂ ಭೇಟಿ ಮಾಡಿದ್ದೇವೆ.ಚಿಕ್ಕಬಳ್ಳಾಪುರದಲ್ಲಿ ತೀರ ಅವಶ್ಯಕತೆ ಇರುವುದರಿಂದ ಮಂತ್ರಿಗಳ ಮೂಲಕ ಭೇಟಿ ಮಾಡಿದ್ದೇವೆ.ಇನ್ನು ಕಾಂಗ್ರೆಸ್ ಪಕ್ಷ ಬಿಡುವ ಪ್ರಶ್ನೇಯೇ ಇಲ್ಲ.ಪಕ್ಷದಲ್ಲಿ ಸಕ್ರಿಯವಾಗಿಯೇ ಇದ್ದೇನೆ.ಡಿಕೆಶಿವಕುಮಾರ್ ಪಕ್ಷದ ಅಧ್ಯಕ್ಷರು ಹರಿಪ್ರಸಾದ್, ರಾಜ್ಯಸಭಾ ಸದಸ್ಯ ಚಂದ್ರಶೇಖರ್ ಒಟ್ಟಿಗೆ ಬಂದು ಒಂದು ಗಂಟೆ ಕಾಲ ಚರ್ಚೆ ಮಾಡಿದ್ದಾರೆ.
ಪಕ್ಷದ ಸಕ್ರಿಯ ಕಾರ್ಯಕ್ರಮಗಳಲ್ಲಿ ಹಿಂದಕ್ಕೆ ಹೋಗುವ ಪ್ರಶ್ನೆಯೇ ಇಲ್ಲ.ಎಲ್ಲವೂ ಊಹಾಪೋಹಗಳು ಅಷ್ಟೇ,ಕೆಲವು ಬಾರಿ ಹೈಕಮಾಂಡ್ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.ಕೆಲವೊಮ್ಮೆ ಅಸಮಾಧಾನ ಇದ್ದರೂ ಒಪ್ಪಿಕೊಳ್ಳಬೇಕಾಗುತ್ತದೆ.ಹೈಕಮಾಂಡ್ ಗೆ ಎಲ್ಲವೂ ಕೂಡ ಗೊತ್ತಿದೆ.ಪಕ್ಷದ ಹಿತದೃಷ್ಟಿಯಿಂದ ಎಲ್ಲವನ್ನೂ ಸಹಿಸಿಕೊಳ್ಳಬೇಕಾಗುತ್ತದೆ ಎಂದು ಮುನಿಯಪ್ಪ ಹೇಳಿದ್ದಾರೆ.
PublicNext
26/08/2022 08:49 pm