ಬೆಂಗಳೂರು: ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಮೆಜೆಸ್ಟಿಕ್ ಬಸ್ ತಂಗುದಾಣದಲ್ಲಿ ಇಂದು ವಿನೂತನವಾಗಿ ಧರಣಿ ನಡೆಸಿದರು.
ಮೊದಲಿನಿಂದಲೂ ಶಾಂತಿಯ ರಾಜ್ಯ ಕರ್ನಾಟಕ. ಇದು ಸರ್ವ ಜನಾಂಗದ ಶಾಂತಿಯ ತೋಟ. ರಾಜ್ಯದಲ್ಲಿ ಶಾಂತಿ ಕದಡುವ ಕೆಲಸವಾಗುತ್ತಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದಲ್ಲಿ ಕನ್ನಡಕ್ಕೆ ಅಪಮಾನವಾದ್ರೆ ನಾವು ಸುಮ್ಮನಿರಲ್ಲ. ಕನ್ನಡಪರ ಹೋರಾಟಗಾರರ ಸಭೆ ನಡೆಸುತ್ತೇವೆ ಎಂದು ವಾಟಾಳ್ ಎಚ್ಚರಿಕೆ ನೀಡಿದ್ದಾರೆ.
ಕನ್ನಡ ನಾಡಲ್ಲಿ ಸಾವರ್ಕರ್ ಯಾತ್ರೆಗೆ ಯಾವ ಅವಕಾಶವನ್ನೂ ಕೊಡಬಾರದು. ಮೊಟ್ಟೆ ತಿನ್ನಲು ಮಾತ್ರ ಇರೋದು. ಮೊಟ್ಟೆಯನ್ನು ಎಸೆಯುವುದು ಅಂದ್ರೆ ಏನು? ಮೊಟ್ಟೆ ಒಡೆಯುವ ಸಂಸ್ಕೃತಿ ಇಲ್ಲ. ಹಾಗಾಗಿ ಕೋಳಿ ಚಳವಳಿ ನಡೆಸಲಾಗುತ್ತಿದೆ. ವಿರೋಧ ಪಕ್ಷದ ನಾಯಕರನ್ನು ಗೌರವಯುತವಾಗಿ ಕಾಣಬೇಕು. ಸಿಎಂ ಬೊಮ್ಮಾಯಿ ಇದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ವಾಟಾಳ್ ನಾಗರಾಜ್ ಅಸಮಾಧಾನ ಹೊರಹಾಕಿದ್ದಾರೆ.
PublicNext
25/08/2022 03:29 pm