ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೊಡಿಗೆಹಳ್ಳಿಗೆ ಸಚಿವ ಸೋಮಶೇಖರ್ ಭೇಟಿ; ಕುಂದುಕೊರತೆ ಆಲಿಕೆ, ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ

ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಕೊಡಿಗೆಹಳ್ಳಿ ಗ್ರಾಮ ಪಂಚಾಯಿತಿ ಭಾಗದ ಹಳ್ಳಿಗಳ ಅಭಿವೃದ್ಧಿ ಕಾರ್ಯಗಳಿಗೆ 10 ಕೋಟಿ ಹಣ ಬಿಡುಗಡೆಯಾಗಿದ್ದು, ಹಳ್ಳಿಯ ರಸ್ತೆಗಳಿಗೆ 4 ಕೋಟಿ, ಹೊಸ ಗ್ರಂಥಾಲಯ ನಿರ್ಮಾಣ, ಶುದ್ಧನೀರಿನ ಘಟಕ ಹೀಗೆ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಈ ಹಿನ್ನೆಲೆ ಇವತ್ತು ಹಳ್ಳಿಗೆ ಭೇಟಿ ನೀಡಿದ ಸಚಿವ ಎಸ್.ಟಿ. ಸೋಮಶೇಖರ್ ಗ್ರಾಮ ಪಂಚಾಯಿತಿಯ ಹಲವಾರು ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಕನ್ನಲ್ಲಿ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯ ಆವರಣದ ಬಳಿ, ಡಿಜಿಟಲ್ ಗ್ರಂಥಾಲಯ, ಘನ ತ್ಯಾಜ್ಯ ವಿಲೇವಾರಿ ವಾಹನಗಳ ಲೋಕಾರ್ಪಣೆ, ಮನೆಗಳಿಗೆ ಕಸದ ಬುಟ್ಟಿ ವಿತರಣೆ, ಉಚಿತ ವೈಫೈ ಸಂಪರ್ಕ ವ್ಯವಸ್ಥೆ, ಪಿಂಚಣಿ ಅದಾಲತ್ ಮತ್ತು ಆಧಾರ್ ಕಾರ್ಡಿಗೆ ವೋಟರ್ ಐಡಿ ಜೋಡಿಸುವ ಕಾರ್ಯಕ್ರಮ ಹಾಗೂ ಕನ್ನಲ್ಲಿ ಪ್ರೌಢಶಾಲಾ ಮತ್ತು ಪ್ರಾಥಮಿಕ ಶಾಲೆ ಮಕ್ಕಳಿಗೆ ಟ್ರಸ್ಟ್ ವತಿಯಿಂದ ಸಮವಸ್ತ್ರ ವಿತರಣೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಒಟ್ಟಿಗೆ ಚಾಲನೆ ನೀಡಿದ್ರು.

ಬೆಂಗಳೂರಿನಲ್ಲಿ ಹಳ್ಳಿಗಳ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಯಶವಂತಪುರ ಕ್ಷೇತ್ರದಲ್ಲಿ 90% ಕಾಮಗಾರಿಗಳು ಮುಗಿದಿದೆ. ಏನೇ ಸಮಸ್ಯೆ ಇದ್ರು ದಯವಿಟ್ಟು ನನ್ನ ಗಮನಕ್ಕೆ ತನ್ನಿ ಎಂದು ಹೇಳುತ್ತಾ, ನೇರವಾಗಿ ಗ್ರಾಮಸ್ಥರ ಹತ್ತಿರ ಸಚಿವರು ಸಂವಾದ ನಡೆಸಿದರು.

Edited By : Shivu K
Kshetra Samachara

Kshetra Samachara

20/08/2022 11:14 am

Cinque Terre

2.67 K

Cinque Terre

0

ಸಂಬಂಧಿತ ಸುದ್ದಿ