ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಸಿದ್ದು ಮೇಲೆ ಮೊಟ್ಟೆ ಎಸೆದ ಕೇಸ್ : ಕಾಂಗ್ರೆಸ್ ಕಾರ್ಯಕರ್ತರಿಂದ ಪ್ರತಿಭಟನೆ

ಆನೇಕಲ್: ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆಯಿಸಿದ್ದನ್ನು ಖಂಡಿಸಿ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿಂದು ಚಂದಾಪುರ ಸರ್ಕಲ್ ನಲ್ಲಿ ಟೈರಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

ಸಂವಿಧಾನ ವಿರೋಧಿ ಬಿಜೆಪಿ ಸರ್ಕಾರ ಕಾನೂನಂತೆ ಕಾನೂನು ಅವರಪ್ಪದಂತೆ ಎಂದು ಧಿಕ್ಕಾರ ಕೂಗಿದರು.

ಇನ್ನು ಮೊಟ್ಟೆ ಎಸೆದ ಬಿಜೆಪಿ ಗೂಂಡಾಗಳನ್ನ ಬಂಧನ ಮಾಡುವಂತೆ ಒತ್ತಾಯಿಸಿದ್ದಾರೆ. ಇದೆ ವೇಳೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಶಾಸಕ ಬಿ. ಶಿವಣ್ಣ ಸರ್ಕಾರ ಏನು ಕೆಲಸ ಮಾಡುತ್ತಿಲ್ಲ ಜನರನ್ನ ಬೇರೆಕಡೆ ಸೆಳೆಯಲು ಈ ರೀತಿಯ ಕುತಂತ್ರ ಬುದ್ಧಿ ಮಾಡುತ್ತಿದೆ. ಈಗ ಬಿಜೆಪಿ ಸರ್ಕಾರ ಸಚಿವರು ಮತ್ತು ಎಂಎಲ್ ಎಗಳು ಪ್ರವಾಸ ಕೈಗೊಂಡಾಗ ಕಾಂಗ್ರೆಸ್ ಕಾರ್ಯಕರ್ತರು ಬೇರೆಯವರು ಇದೇ ರೀತಿ ಮಾಡಿದರೆ ಅವರಿಗೆ ಅವಮಾನ ಆಗಲ್ವಾ ? ಪಕ್ಷಭೇದ ಮರೆತು ಈ ಕೃತ್ಯ ಎಸಗಿರುವ ಗೂಂಡಾಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಇದೇ ಪ್ರವೃತಿ ಮುಂದುವರೆದರೆ ನಾವು ಕೂಡ ಅದೇ ದಾರಿಯನ್ನ ಹಿಡಿಯುತ್ತೇವೆ ಎಂದು ಎಚ್ಚರಿಕೆ ನೀಡಿದರು.

Edited By : Shivu K
Kshetra Samachara

Kshetra Samachara

20/08/2022 10:26 am

Cinque Terre

4.48 K

Cinque Terre

0

ಸಂಬಂಧಿತ ಸುದ್ದಿ