ಆನೇಕಲ್: ರಾಜಸ್ಥಾನ ಮತ್ತು ಉತ್ತರಪ್ರದೇಶದಲ್ಲಿ ನಡೆದ ವಿಧ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿ ದಲಿತ ಪರ ಮತ್ತು ಮಹಿಳಾ ಸಂಘಟನೆಗಳು ಒಕ್ಕೂಟದಿಂದ ಇಂದು ಪಂಜಿನ ಮೆರವಣಿಗೆಯನ್ನು ಆನೇಕಲ್ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.
ಇನ್ನು ಕೇಂದ್ರ ಸರ್ಕಾರ ಮತ್ತು ರಾಜಸ್ಥಾನ,ಉತ್ತರ ಪ್ರದೇಶದ ಎಂಪಿ ಎಎಲ್ಎ ಮೇಲೆ ಗಳ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ರು . ಇನ್ನು ಶಿಕ್ಷಕನ ಅನುಕು ದೇಹಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆಯನ್ನು ನಡೆಸಿದರು
ಇನ್ನು ಪಂಜಿನ ಮೆರವಣಿಗೆ ಆನೇಕಲ್ ಪಟ್ಟಣದ ಅಂಬೇಡ್ಕರ್ ಪ್ರತಿಮೆಯಿಂದ ತಾಲ್ಲೂಕು ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿ ತಾಲ್ಲೂಕು ತಹಶೀಲ್ದಾರ್ ಮುಖೇನ ರಾಷ್ಟ್ರಪತಿಗಳಿಗೆ ಹಾಗೂ ಪ್ರಧಾನಿಗಳಿಗೆ ಮನವಿ ಪತ್ರದ ದೂರನ್ನು ಸಲ್ಲಿಸಲಾಯಿತು. ಇನ್ನು ಪಂಜಿನ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಬಿತ್ತಿಪತ್ರಗಳನ್ನ ಕೈಹಿಡಿದು ಪ್ರತಿಭಟನಾ ರ್ಯಾಲಿಯಲ್ಲಿ ಭಾಗಿಯಾಗಿದ್ದರು.
ಮಡಿಕೆಗಳನ್ನ ತಲೆಯ ಮೇಲೆ ಹೊತ್ತು ವಿದ್ಯಾರ್ಥಿಗಳಿಂದ ವಿನೂತನ ಪ್ರತಿಭಟನೆ ನಡೆಸಿದ್ದರು, ಪ್ರತಿಭಟನೆಯಲ್ಲಿ ನೂರಾರು ಮಂದಿ ವಿದ್ಯಾರ್ಥಿಗಳು ಹಾಗೂ ದಲಿತ ಪರ ಹೋರಾಟಗಾರರು ಭಾಗಿಯಾಗಿದ್ದರು.
Kshetra Samachara
19/08/2022 11:01 pm