ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದು ಹಲ್ಲೆ ಮಾಡಿರುವದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಫ್ರೀಡಂಪಾರ್ಕ್‌ನಲ್ಲಿ ಧರಣಿ ನಡೆಸಿದ್ದಾರೆ..
ಈ ಧರಣಿಯಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಹರಿಪ್ರಸಾದ್ ಭಾಗಿಯಾಗಿದ್ದಾರೆ. ಇದೇ ವೇಳೆ ಮಾತನಾಡಿದ ಹರಿಪ್ರಸಾದ್ ಜ್ಞಾನ ಇಲ್ಲದ ಗೃಹ ಮಂತ್ರಿ ಆರಗ ಜ್ಞಾನೇಂದ್ರ. ಅತ್ಯಂತ ಭ್ರಷ್ಟ ಮಂತ್ರಿ ಇದ್ದರೆ ಅದು ಹೋಂ ಮಿನಿಸ್ಟರ್. ಮೊದಲು ಜೈಲಿಗೆ ಹೋಗಬೇಕಾದ ವ್ಯಕ್ತಿ ಏನಾದರೂ ಇದ್ರೆ ಅದು ಗೃಹ ಮಂತ್ರಿ. ಆರ್ ಎಸ್ ಎಸ್ ಬಿಜೆಪಿಯವರು ಮೊಟ್ಟೆ ಕದ್ದು ತಿಂತಾರೆ. ರಸಲ್ ಮಾರ್ಕೆಟ್‌ಗೆ ಹೋಗಿ ನೋಡಿ, ಕದ್ದು ಮಾಂಸ ತಿಂತಾ ಇರ್ತಾರೆ ಎನ್ನುವ ಮೂಲಕ ಕಿಡಿಕಾರಿದ್ದಾರೆ..
ಸಿದ್ದರಾಮಯ್ಯ ಕೊಡಗಿಗೆ ಪಿಕ್ನಿಕ್ ಮಾಡುವುದಕ್ಕೆ ಹೋಗಿರಲಿಲ್ಲ, ಕೊಡಗಿನ ಜನರ ಸಮಸ್ಯೆ ಬಗೆಹರಿಸೋಕೆ ಹೋದವರು. ಈ ತರಹ ಮೊಟ್ಟೆ ಎಸೆದು ಓಡಿ ಹೋಗುವವರಲ್ಲ. ಈ ವಿಷಯ ಕುರಿತು ಚರ್ಚೆಗೆ ಬನ್ನಿ. ಬೆಂಗಳೂರಿನ ಕಸದ ತೊಟ್ಟಿ ಮೇಲು ಸಾವರ್ಕರ್ ಪೋಟೋ ಹಾಕುವ ಯೋಗ್ಯತೆಯಿಲ್ಲ ಎಂದು ಬಿಜೆಪಿ ವಿರುದ್ಧ ಹರಿಪ್ರಸಾದ್ ಅಸಾಮಾಧಾನ ಹೊರಹಾಕಿದ್ರು.
ಅಷ್ಟೇ ಅಲ್ಲದೆ ಖಾಕಿ ಚಡ್ಡಿ ಕರಿ ಟೋಪಿಯವರು ಲಾಠಿ ಹಿಡಿದುಕೊಂಡು ನಮ್ಮನ್ನು ಭಯ ಬೀಳಿಸ್ತಾರೆ. ಅಂದ್ರೆ ನಾವು ಭಯ ಬೀಳುವವರಲ್ಲ. ಸಿದ್ದರಾಮಯ್ಯ ಮೇಲೆ ಮಾಡಿದ ಹಲ್ಲೆ ಖಂಡನೀಯ. ಸಿಎಂ ಬೊಮ್ಮಾಯಿ ಆರ್ ಎಸ್ ಎಸ್ ಕೈಗೊಂಬೆ ಆಗಿ ಕುಳಿತಿದ್ದಾರೆ. ಅವರು ಕ್ಷಮೆ ಕೇಳುವುದು ಯಾವ ಲೆಕ್ಕಕ್ಕೂ ಇಲ್ಲ. ಅಮಿತ್ ಶಾ ಮೊದಲು ಕ್ಷಮೆ ಕೇಳಬೇಕೆಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದಾರೆ.
PublicNext
19/08/2022 02:11 pm