ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಬಿಎಂಪಿ 243 ವಾರ್ಡ್ ಮೀಸಲಾತಿ ಅಂತಿಮ ಪಟ್ಟಿ ಪ್ರಕಟ

ಬೆಂಗಳೂರು: ಬಿಬಿಎಂಪಿ ಚುನಾವಣೆ ಹಿನ್ನೆಲೆ ಅಂತಿಮ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ. ಈ ಹಿಂದೆ ಪ್ರಕಟಿಸಿ ಏಳು ದಿನಗಳ ಕಾಲಾವಕಾಶವನ್ನು ಸರ್ಕಾರ ನೀಡಿತ್ತು. 7 ದಿನದ ನಂತರ ಬರುವ ಆಕ್ಷೇಪಣೆಗೆ ಸ್ವೀಕರಿಸಲಾಗುವುದಿಲ್ಲ ಎಂದು ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮಂಜುನಾಥ್ ಆದೇಶ ಹೊರಡಸಿದ್ದರು. ಇದೀಗ 243 ವಾರ್ಡ್ ಮೀಸಲಾತಿ ಅಂತಿಮ ಪಟ್ಟಿಯನ್ನು ಸರ್ಕಾರ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಮಂಜುನಾಥ್ ಪ್ರಕಟಿಸಿದ್ದಾರೆ.

ವಾರ್ಡ್ ಮೀಸಲಾತಿ ಬಗ್ಗೆ ವಿಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದರು. ಬಿಜೆಪಿ ನಾಯಕರ ಮನೆಯಲ್ಲಿ ಮೀಸಲಾತಿ ಕಾರ್ಯ ನಡೆದಿದೆ. ತಮಗೆ ಬೇಕಾದ ವಾರ್ಡ್‌ಗೆ ಬೇಕಾದ ಮೀಸಲಾತಿ ಮಾಡಿಕೊಳ್ಳುತ್ತಾರೆ. ವಾರ್ಡ್ ವಿಂಗಡಣೆಯನ್ನೂ ಸಹ ಇದೇ ರೀತಿ ಮಾಡಿದ್ದರು ಎಂದು ಕಾಂಗ್ರೆಸ್​ ನಾಯಕರು ಆರೋಪಿಸಿದ್ದರು.

ಈ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಇದರ ಮಧ್ಯೆ ಸರ್ಕಾರ ಅಂತಿಮ ಪಟ್ಟಿ ಪ್ರಕಟಿಸಿದ್ದು, ಬಹುತೇಕ ವಾರ್ಡ್ ಗಳ ಮೀಸಲಾತಿ ಆಕ್ಷೇಪಣೆಗೂ ಮುನ್ನ ಪ್ರಕಟಿಸಿದ್ದಂತೆ ಇದೆ.

Edited By : Vijay Kumar
Kshetra Samachara

Kshetra Samachara

17/08/2022 08:31 am

Cinque Terre

3.99 K

Cinque Terre

0

ಸಂಬಂಧಿತ ಸುದ್ದಿ