ಬೆಂಗಳೂರು : ಕರ್ನಾಟಕದ ಉಚ್ಚ ನ್ಯಾಯಾಲಯ ಎಸಿಬಿ ರದ್ದು ಮಾಡಿ ಆದೇಶಿದೆ. ನಮ್ಮ ಸರ್ಕಾರ ಕೋರ್ಟ್ ಆದೇಶವನ್ನ ಗೌರವಿಸುತ್ತದೆ. ಹಿಂದೆ ಲೋಕಾಯುಕ್ತ ಪ್ರಭಲವಾಗಿ ಭ್ರಷ್ಟರಿಗೆ ಸಿಂಹಸ್ವಪ್ನವಾಗಿತ್ತು.
ಕಾಂಗ್ರೆಸ್ಸಿನ ಸಿದ್ದರಾಮಯ್ಯ ಸರ್ಕಾರ ಬಂದ್ಮೇಲೆ ಲೋಕಾಯುಕ್ತ ಶಕ್ತಿ ಕಸಿದು, ACB ರಚಿಸಿದ್ರು. ತಮ್ಮ ಮೇಲಿನ 40 ಪ್ರಕರಣ ಮುಚ್ಚಿಹಾಕಿ, ಬಿ ರಿಪೋರ್ಟ್ ಹಾಕಿಸಿಕೊಂಡು ಕೇಸ್ ಗಳನ್ನು ಮುಚ್ಚಿಹಾಕಿದ್ರು.
ಲೋಕಾಯುಕ್ತ ಇದ್ದಾಗ ನಮ್ಮ ಸರ್ಕಾರದ ಮಂತ್ರಿಗಳ ಮೇಲೆ, ನನ್ನ ಮೇಲೆಯೂ ದಾಳಿ ಮಾಡಿ ತನಿಖೆ ಮಾಡಿದ್ರು. ಯಾರೇ ದೂರು ಕೊಟ್ಟಾಗ ಲೋಕಾಯುಕ್ತ ತನಿಖೆ ಮಾಡುತ್ತಿತ್ತು. ಆದ್ರೆ ಸಿದ್ದರಾಮಯ್ಯ ತಮ್ಮ ಹಗರಣ ಮುಚ್ಚಿಹಾಕಲು ಲೋಕಾಯುಕ್ತ ಅಧಿಕಾರ ಕಸಿದು, ಎಸಿಬಿ ರಚನೆ ಮಾಡಿದ್ದರು. ಇದಕ್ಕೆಲ್ಲಾ ಕಾರಣ ಸಿದ್ದರಾಮಯ್ಯ ಹಾಗೂ ಮಂತ್ರಿ ಮಂಡಲ ಎಂದು ಬಿಡಿಎ ಅಧ್ಯಕ್ಷ SR.ವಿಶ್ವನಾಥ್ ಯಲಹಂಕದಲ್ಲಿ ಹೈಕೋರ್ಟ್ ಆದೇಶವನ್ನು ಸಮರ್ಥಿಸಿಕೊಂಡರು.
ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಯಲಹಂಕ.
PublicNext
13/08/2022 09:46 pm