ರಿಪೋರ್ಟರ್: ರಂಜಿತಾಸುನಿಲ್
ಬೆಂಗಳೂರು: 75 ನೇ ಸ್ವಾತಂತ್ರೋತ್ಸವದ ಅಂಗವಾಗಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು, ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಕೆಂಗೇರಿಯ ಕದಂಬ ಹೋಟೆಲ್ ಬಳಿ ಬಿಬಿಎಂಪಿ ಅಯೋಜಿಸಿದ ಪೌರ ಕಾರ್ಮಿಕರಿಗೆ ಮತ್ತು ಸಾರ್ವಜನಿಕರಿಗೆ ಉಚಿತವಾಗಿ ಧ್ವಜವನ್ನು ವಿತರಿಸಿದ್ರು.
ನಂತರ ಮಾತನಾಡಿದ ಸಚಿವರು ದೇಶಾದ್ಯಂತ 75 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಡಗರ ಸಂಭ್ರಮದಿಂದ ಹಬ್ಬದ ರೀತಿಯಲ್ಲಿ ಆಚರಿಸುತ್ತಿದ್ದೇವೆ. ಪ್ರತಿ ಮನೆ ಮನೆಯಲ್ಲಿ ಹರ್ ಘರ್ ತಿರಂಗ ಎಂಬ ಘೋಷಣೆಯೊಂದಿಗೆ ತ್ರಿವರ್ಣ ಧ್ವಜವನ್ನು ಹಾರಿಸುವುದರ ಮೂಲಕ ಮನೆ ಮನೆಗೆ ಸ್ವಾತಂತ್ರ್ಯ ದಿನದ ಮಹತ್ವವನ್ನು ಸಾರಬೇಕಾಗಿದೆ. ಪ್ರತಿಯೊಂದು ಮನೆಗಳಲ್ಲಿಯೂ ರಾಷ್ಟ್ರ ಧ್ವಜ ಹಾರಿಸಬೇಕು ಎಂದರು.
PublicNext
12/08/2022 01:55 pm