ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜೀವ್ ಗಾಂಧಿ ಸದ್ಭಾವನಾ ಜ್ಯೋತಿ ಯಾತ್ರೆ : ಕಾಂಗ್ರೆಸ್ ನಾಯಕರಿಂದ ಸ್ವಾಗತ

ನೆಲಮಂಗಲ : ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ 78 ನೇ ಜನ್ಮದಿನದ ಅಂಗವಾಗಿ ತಮಿಳುನಾಡು ರಾಜ್ಯದ ಪೆರಂಬಧೂರಿನಿಂದ ಆರಂಭವಾಗುವ ರಾಜೀವ್ ಗಾಂಧಿ ಅವರ 31 ನೇ ಸದ್ಭಾವನಾ ಜ್ಯೋತಿ ಯಾತ್ರೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣಕ್ಕೆ ಆಗಮಿಸಿತು.

ನೆಲಮಂಗಲ ಕಾಂಗ್ರೆಸ್ ನಾಯಕರು ಜ್ಯೋತಿ ಸ್ವೀಕರಿಸಿ ವಾದ್ಯತಂಡ ಹಾಗೂ ವೀರಗಾಸೆ ಕುಣಿತದೊಂದಿಗೆ ಸದ್ಭಾವನಾ ಜ್ಯೋತಿಯನ್ನು ಬರಮಾಡಿಕೊಂಡರು. ಮಾಜಿ ಸಚಿವ ಆಂಜನಮೂರ್ತಿ, ಮಾಜಿ ವಿಧಾನಪರಿಷತ್ ಸದಸ್ಯ ಬಿಎಮ್ ಎಲ್ ಕಾಂತರಾಜು ಸೇರಿದಂತೆ ವಿವಿಧ ನಾಯಕರು ಬರಮಾಡಿಕೊಂಡು ಗೌರವಸಲ್ಲಿಸಿ ಕಳುಹಿಸಿಕೊಟ್ಟರು.

ಆಗಷ್ಟ 09 ರಿಂದ ತಮಿಳುನಾಡಿನ ಶ್ರೀ ಪೆರಂಬದೂರಿನಲ್ಲಿ ಶುರುವಾಗಿರುವ ಈ ರಾಜೀವ್ ಗಾಂಧಿ ಸದ್ಭಾವನಾ ಯಾತ್ರೆ ತೆಲಂಗಾಣ, ಮಹಾರಾಷ್ಟ್ರ, ಮಧ್ಯಪ್ರದೇಶ, ಉತ್ತರಪ್ರದೇಶದ ಮೂಲಕ ನವದೆಹಲಿಯವರೆಗೂ ಸಾಗಲಿದೆ.

Edited By : Shivu K
Kshetra Samachara

Kshetra Samachara

10/08/2022 05:53 pm

Cinque Terre

3.55 K

Cinque Terre

0

ಸಂಬಂಧಿತ ಸುದ್ದಿ