ನೆಲಮಂಗಲ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮದಿನದ ಅಂಗವಾಗಿ ತಮಿಳುನಾಡಿನ ಪೆರಂಬಧೂರಿನಿಂದ ಆರಂಭಗೊಳ್ಳುವ ರಾಜೀವ್ ಗಾಂಧಿ ಸದ್ಭಾವನಾ ಜೋತಿ ಯಾತ್ರೆಗೆ ನೆಲಮಂಗಲ ತಾಲ್ಲೂಕಿನ ಕೈ ಪಕ್ಷದ ನಾಯಕರು ಜ್ಯೋತಿ ಸ್ವೀಕರಿಸಲು ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಈ ಸಂಬಂಧ ನೆಲಮಂಗಲ ಕೆಪಿಸಿಸಿ ಕಛೇರಿಯಲ್ಲಿ ಮಾಜಿ ಸಚಿವ ಆಂಜನಮೂರ್ತಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಉಮಾದೇವಿ ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷರು ಆದ ರಂಗನಾಥ್ ಮತ್ತು ಸಪ್ತಗಿರಿ ಶಂಕರ್ ನಾಯಕ್ ಪತ್ರಿಕಾಗೋಷ್ಠಿ ನಡೆಸಿದರು.
ಇನ್ನೂ ಪೂರ್ವಭಾವಿ ಸಭೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಮಾಜಿ ಸಚಿವ ಆಂಜನಮೂರ್ತಿ ಮಾತನಾಡಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಆದೇಶದ ಮೇರೆಗೆ ನೆಲಮಂಗಲ ಕ್ಷೇತ್ರದಲ್ಲಿ 75 ಕಿ.ಮಿ ವರೆಗೆ ಪಾದಯಾತ್ರೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದು ಹಾಗೂ ಈ ಪಾದಯಾತ್ರೆಗೆ ನೆಲಮಂಗಲ ಬ್ಲಾಕ್ ಕಾಂಗ್ರೆಸ್, ಯೂತ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷರು, ಸದಸ್ಯರು ಹಾಗೂ ನೆಲಮಂಗಲ ತಾಲ್ಲೂಕಿನ ಎಲ್ಲಾ ಕಾಂಗ್ರೆಸ್ ಮುಖಂಡರೆಲ್ಲರೂ ಒಟ್ಟುಗೂಡಿ ಪಾದಯಾತ್ರೆಯನ್ನ ಯಶಸ್ವಿಗೊಳಿಸುತ್ತೇವೆ. ಚುನಾವಣೆ ಅಂತ ಬಂದಾಗ ಹೈಕಮಾಂಡ್ ತೀರ್ಮಾನದಂತೆ ಟಿಕೆಟ್ ಸಿಕ್ಕವರ ಜೊತೆಗೆ ನಿಂತು ಪಕ್ಷದ ಸಂಘಟನೆಗೆ ಎಲ್ಲರೂ ಮುಂದಾಗುತ್ತೇವೆ. ನಮ್ಮ ಪಕ್ಷದ ಅಭ್ಯರ್ಥಿಯನ್ನ ಜಯಶೀಲರನ್ನಾಗಿ ಮಾಡುವ ಪ್ರಾಮಾಣಿಕ ಕೆಲಸ ಮಾಡುತ್ತೇವೆ ಎಂದರು.
ಅಲ್ಲದೆ ಇದೇ ಸಂದರ್ಭದಲ್ಲಿ ಮಾತನಾಡಿದ ಕೆಪಿಸಿಸಿ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಉಮಾದೇವಿ ಮಾತನಾಡಿ ರಾಜೀವ್ ಗಾಂಧಿ ಸದ್ಭಾವನಾ ಜೋತಿ ಯಾತ್ರೆ ಹಾಗೂ ಪಾದಯಾತ್ರೆಗೆ ಸಕಲ ಸಿದ್ದತೆ ಮಾಡಿಕೊಂಡಿದ್ದೇವೆ. ಇದೇ 10 ನೇ ತಾರೀಖು ನೆಲಮಂಗಲಕ್ಕೆ ಆಗಮಿಸುತ್ತಿರೋ ಜ್ಯೋತಿಯಾತ್ರೆಯನ್ನ ನಾವು ಸ್ವೀಕರಿಸಿ ಅದನ್ನು ಇಲ್ಲಿಂದ ದೆಹಲಿಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಇದನ್ನು ನೆಲಮಂಗಲ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ತುಂಬುವ ಸಲುವಾಗಿ ಪಕ್ಷ ಸಂಘಟನೆಗೆ ಸಹಕಾರಿ ಆಗುತ್ತದೆ ಎಂದರು.
Kshetra Samachara
09/08/2022 09:21 am