ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜನರು ಸಂಕಷ್ಟದಲ್ಲಿದಾಗ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂದು ಶ್ರೀರಾಮುಲು ಟ್ವೀಟ್!

ಬೆಂಗಳೂರು:ಹುಟ್ಟುಹಬ್ಬದ ದಿನ ಶ್ರೀರಾಮುಲು ರಾಜ್ಯದ ಜನರಿಗಾಗಿ ಟ್ವೀಟ್ ಮಾಡಿದ್ದಾರೆ. ರಾಜ್ಯದಲ್ಲಿ ಕಳೆದ ಹಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಅನೇಕ ಜನ ಪ್ರಾಣ ಕಳೆದುಕೊಂಡು ಆಸ್ತಿ ಪಾಸ್ತಿ ನಾಶವಾಗಿ ಸಂಕಷ್ಟದಲ್ಲಿದ್ದಾರೆ. ಜನತೆ ಕಷ್ಟದಲ್ಲಿರುವಾಗ ನನ್ನ ಹುಟ್ಡು ಹಬ್ಬ ಆಚರಿಸಿಕೊಳ್ಳಲು ಮನಸ್ಸು ಒಪ್ಪುತ್ತಿಲ್ಲ. ಇದು ಒಪ್ಪುವ ವಿಚಾರವಲ್ಲ ಎಂದು ಶ್ರೀರಾಮುಲು ತಿಳಿಸಿದ್ದಾರೆ.

ಜನರು ಕಣ್ಣೀರಲ್ಲಿ ಕೈ ತೊಳೆಯುತ್ತಿರುವಾಗ ಹಾರ ತುರಾಯಿ ಹಾಕಿ, ಕೇಕ್‌ ಕತ್ತರಿಸಿ ವಿಜೃಂಭಣೆ ಮಾಡುವುದು ಬೇಡ.ಅಭಿಮಾನಿಗಳು, ಕಾರ್ಯಕರ್ತರು ಹಣ ಖರ್ಚು ಮಾಡಿಕೊಂಡು ನನ್ನಲ್ಲಿಗೆ ಬರುವುದು ಬೇಡ.ನೀವಿದ್ದಲ್ಲಿಯೇ ಬಡವರಿಗೆ, ದೀನ ದಲಿತರಿಗೆ, ಮಳೆ-ನೆರೆಯಿಂದ ತತ್ತರಿಸಿದ ಜನರಿಗೆ ನೆರವಾಗಿ.ನನ್ನ ಮೇಲೆ ಅಭಿಮಾನ ಇರುವ ಹಾಗೂ ನನಗೆ ಪ್ರೀತಿ ತೋರುವ ಎಲ್ಲರೂ ನನ್ನ ಈ ಮನವಿಗೆ ಸ್ಪಂದಿಸುವಿರಿ ಎಂದು ನಂಬಿದ್ದೇನೆ.ನಿಮ್ಮ‌ಅಭಿಮಾನಕ್ಕೆ ಸದಾ ಚಿರ ಋಣಿ ಎಂದು ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

Edited By : PublicNext Desk
Kshetra Samachara

Kshetra Samachara

07/08/2022 01:20 pm

Cinque Terre

3.78 K

Cinque Terre

0

ಸಂಬಂಧಿತ ಸುದ್ದಿ