ವರದಿ- ಗೀತಾಂಜಲಿ
ಬೆಂಗಳೂರು: ಸ್ವಾತಂತ್ಯ್ರ ಬಂದು 75 ವರ್ಷವಾಗಿದ್ದು, ಅಮೃತಮಹೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಹೀಗಾಗಿ ದೇಶಾದ್ಯಂತ 25 ಕೋಟಿ ಬಾವುಟ ಹಾರಿಸಲು ಯೋಜಿಸಲಾಗಿದೆ ಎಂದು MLC ಎನ್. ರವಿಕುಮಾರ್ ತಿಳಿಸಿದ್ರು.
ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 75 ಲಕ್ಷ ಮನೆಗಳಲ್ಲಿ ಧ್ವಜಾರೋಹಣ ಮಾಡಲು ಪ್ಲ್ಯಾನ್ ಮಾಡಿದ್ದೇವೆ. ಪ್ರತಿ ಕ್ಷೇತ್ರದಲ್ಲಿ 35 ಸಾವಿರಕ್ಕೂ ಹೆಚ್ಚು ಬಾವುಟ ಹಾರಿಸಲಿದ್ದೇವೆ. 4,5,6 ರಂದು ಎಲ್ಲಾ ಗ್ರಾಮಪಂಚಾಯತಿ, ತಾ.ಪಂ, ಜಿ.ಪಂ, ನಗರ ಸಭೆ ವ್ಯಾಪ್ತಿಯಲ್ಲಿ ಸಿದ್ಧತಾ ಸಭೆ ನಡೆಸಲಾಗುತ್ತದೆ. ಅಂದು ಧ್ವಜಕ್ಕೆ ನೀಡುವ ಗೌರವದ ಕುರಿತು ಜನರಿಗೆ ಮಾಹಿತಿ ನೀಡಲಾಗುತ್ತದೆ. 75 ಕಡೆ ಬೃಹತ್ ಧ್ವಜ ಮೆರವಣಿಗೆ ಹಮ್ಮಿಕೊಳ್ಳಲಾಗುತ್ತದೆ ಎಂದರು.
ಇನ್ನು ಸೈಕಲ್ ಜಾಥಾ, 75 ಕಡೆ ಎತ್ತಿನ ಬಂಡಿಯಾತ್ರೆ ಕೂಡಾ ನಡೆಯಲಿದೆ. 175 ಕಡೆಯಲ್ಲಿ ಮಹಿಳಾ ಮೋರ್ಚಾದಿಂದ ತ್ರಿವರ್ಣ ಧ್ವಜ ಜಾಥಾ ನಡೆಯಲಿದೆ. ವಿಧುರಾಶ್ವಥ, ಮಂಗಳೂರು, ಹಲಗಲಿ, ಸುರಪುರದಲ್ಲಿ ವಿಶಿಷ್ಟವಾಗಿ ಸ್ವಾತಂತ್ರ್ಯ ದಿನಾಚರಣೆ ಮಾಡುತ್ತೇವೆ. ಸ್ವದೇಶಿ ಚಳುವಳಿ ನೆನಪಿಗಾಗಿ ಕಾಟನ್ ಅಥವಾ ಖಾದಿ ಬಳಸಲು ಕೂಡ ಸಲಹೆ ನೀಡಿದ್ದೇವೆ ಎಂದು ರವಿಕುಮಾರ್ ಹೇಳಿದ್ದಾರೆ.
ಆ10, 11, 12 ರಂದು ಪಥ ಸಂಚಲನ, ಮ್ಯಾರಥಾನ್, ಸೈಕಲ್ ಜಾಥ, ಬೈಕ್ ಜಾಥ ಆಯೋಜಿಸಲು ಕರೆ ಕೊಡಲಾಗಿದ್ದು, ಕಾರ್ಯಕ್ರಮದ ಮುಖಾಂತರ ಗಿನ್ನಿಸ್ ದಾಖಲೆ ಮಾಡಲು ಮುಂದಾಗಿದ್ದೇವೆ ಎಂದು ತಿಳಿಸಿದ್ರು..
PublicNext
03/08/2022 04:02 pm