ವಿಶೇಷ ವರದಿ--ಪ್ರವೀಣ್ ನಾರಾಯಣ ರಾವ್
ಬೆಂಗಳೂರು: ಸದ್ಯಕ್ಕೆ ಕರುನಾಡ ಮಹಾನಾಯಕನಂತೆ ಪ್ರತಿಬಿಂಬಿತವಾಗುತ್ತಿರುವ ಮಾಜಿ ಸಿಎಂ,ಹಾಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ 75 ನೇ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ ಆಯೋಜಿಸಲಾಗಿರುವ ಅಮೃತ ಮಹೋತ್ಸವಕ್ಕೆ ಬೆಣ್ಣೆ ನಗರಿ ದಾವಣಗೆರೆ ಸಜ್ಜಾಗಿ ನಿಂತಿದೆ..
ಇತಿಹಾಸದಲ್ಲಿ ಹಲವು ರಾಜಕೀಯ ಪರ್ವಗಳಿಗೆ ಸಾಕ್ಷಿಯಾಗಿರುವ ದಾವಣಗೆರೆ ಇದೀಗ ಮತ್ತೊಂದು ಮನ್ವಂತರಕ್ಕೆ ಸಿದ್ದವಾಗಿ ನಿಂತಿದೆ..
ಅಮೃತ ಮಹೋತ್ಸವ ಸಿದ್ದರಾಮಯ್ಯನವರಿಗೇ ಆದರೂ ಅದು ಕರ್ನಾಟಕದ ಕಾಂಗ್ರೆಸ್ ಪಾಲಿಗೆ ನವಚೈತನ್ಯ ಮೂಡಿಸುವ ಸಮಾವೇಶವಾಗಿ ಪರಿಣಮಿಸುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.ಒಂದು ಕಡೆ ಕಾಂಗ್ರೆಸ್ ಪಡೆ ರಣಕೇಕೆ ಹಾಕುತ್ತಿದ್ದರೆ..ಈ ಕಡೆ ಕಮಲ ನಾಯಕರ ಮುಖ ಕಳೆಗುಂದಿ ಹೋಗಿದೆ.
ತಮ್ಮದೇ ಪಕ್ಷದ ಕಾರ್ಯಕರ್ತರು ಸರ್ಕಾರದ ವಿರುದ್ದ ರೊಚ್ಚಿಗೆದ್ದು ಕುಳಿತದ್ದನ್ನು ಕಂಡ ಬಿಜೆಪಿ ನಾಯಕರು ಕಂಗಾಲಾಗಿ ಕುಳಿತಿದ್ದಾರೆ. ತಮ್ಮ ಸರ್ಕಾರದ ಸಾಧನೆ ಹೇಳಿಕೊಳ್ಳಲು ಆಯೋಜಿಸಿದ್ದ ಜನೋತ್ಸವ ಮಕಾಡೆ ಮಲಗಿ ಹೋದ ಹೊತ್ತಿನಲ್ಲಿ ಹೀಗೆ ಸಿದ್ದರಾಮೋತ್ಸವ ದುತ್ತನೆ ಎದ್ದು ನಿಂತಿದ್ದು ಬಿಜೆಪಿಗೆ ತಲೆ ನೋವಾಗಿ ಪರಿಣಮಿಸಿದೆ.. ಸಿದ್ದರಾಮೋತ್ಸವದ ಸುತ್ತಮುತ್ತಣದ ಚಿತ್ರಣ ಈ ವರದಿಯಲ್ಲಿದೆ..
PublicNext
03/08/2022 01:20 pm