ರಿಪೋರ್ಟ್- ರಂಜಿತಾಸುನಿಲ್..
ಬೆಂಗಳೂರು: ಯಶವಂತಪುರ ವಿಧಾನಸಭಾ ಕ್ಷೇತ್ರದ ಕುಂಬಳಗೋಡು ಗ್ರಾಮಪಂಚಾಯಿತಿಯಲ್ಲಿ ಇಂದು ಗ್ರಾಮಸಭೆ ಹಮ್ಮಿಕೊಳ್ಳಲಾಗಿತ್ತು. ವರ್ಷದ ಕುಂದು-ಕೊರತೆ ಲಾಭ, ನಷ್ಟದ ಬಗ್ಗೆ ಸಭೆ ಚರ್ಚಿಸಲಾಯಿತು. ಈ ಸಭೆಯಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಯ ಜನ ಸೇರಿದ್ರು. ಅವರ ಊರಿನಲ್ಲೆ ಏನೆ ಸಮಸ್ಯೆ ಇದ್ರು ಹೇಳಿಕೊಳ್ಳುವ ಅವಕಾಶವನ್ನ ಕಲ್ಪಿಸಲಾಗಿತ್ತು. ಸರ್ಕಾರದ ಮುಖಾಂತರ ಸಿಗುವ ಎಲ್ಲಾ ಸೌಲಭ್ಯಗಳ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಗ್ರಾಮಸಭೆ ನಡೆಸಿದ್ರು.
ಸಭೆಯಲ್ಲಿ ಶಿಕ್ಷಣ, ಪಶುಸಂಗೋಪನೆ, ಬೆಸ್ಕಾಂ, ಕಂದಾಯ ಇಲಾಖೆ, ಹೈನುಗಾರಿಕೆ ಇಲಾಖೆ, ತೋಟಗಾರಿಕೆ ಇಲಾಖೆ ಮುಂದಾದ ಎಲ್ಲಾ ಇಲಾಖೆಯ ಅಧಿಕಾರಿಗಳು ಸೇರಿ ಇಲಾಖೆಗಳಲ್ಲಿರುವ ಸ್ಕೀಮ್‌ಗಳ ಬಗ್ಗೆ ಗ್ರಾಮಸ್ಥರಿಗೆ ತಿಳಿಸಿದ್ರು. ಹಾಗೆ ಗ್ರಾಮಸ್ಥರು ಕೂಡ ಅವರಿಗೆ ಇರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಿಗೆ ಪ್ರಶ್ನೆಯನ್ನ ಕೇಳಿ, ನಮಗೆ ಹೆಚ್ಚಿನ ಸೌಲಭ್ಯ ಒದಗಿಸಿಕೊಡಿ ಎಂದು ಆಗ್ರಹಿಸಿದರು.
ಇನ್ನೂ ಸರ್ಕಾರಿ ಶಾಲೆಯಲ್ಲಿ ವ್ಯಾಸಾಂಗ ಮಾಡಿ ಹೆಚ್ವು ಅಂಕ ಗಳಿಸಿದ ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳಿಗೆ 9200ರೂ. ಚೆಕ್ ವಿತರಿಸಲಾಯ್ತು. ಪಂಚಾಯಿತಿ ವ್ಯಾಪ್ತಿಯಲ್ಲಿರುವ ವಿಶೇಷ ಚೇತನರಿಗೂ ಕೂಡ 9200ರೂ ಚೆಕ್ ವಿತರಿಸಿದ್ರು. ಮತ್ತು ಕುಂಬಳಗೋಡು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ 10 ಸರಕಾರಿ ಶಾಲೆಗಳಿಗೆ ಶುದ್ಧ ಕುಡಿಯುವ ನೀರಿನ ವಾಟರ್ ಫಿಲ್ಟರ್ ಕೊಡಲಾಯ್ತು.
ನಂತರ ಹಲವಾರು ಸಮಸ್ಯೆಗಳ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ಪ್ರೆಶ್ನೆ ಕೇಳಿದ್ರು. ವರ್ಷದ ಆದಯ ಎಷ್ಟಾಗಿದೆ, ಯಾವುದಕ್ಕೆ ಎಷ್ಟು ಖರ್ಚಾಗಿದೆ ಎಂದು ಕೂಲಂಕಷವಾಗಿ ಗ್ರಾಮಸಭೆಯಲ್ಲಿ ಚರ್ಚಿಸಲಾಯ್ತು. ಈ ವರ್ಷದಲ್ಲಿ ಅಷ್ಟು ಸಮಸ್ಯೆಗಳು ಇಲ್ಲದಿದ್ರು, ಅಂಚೆಪಾಳ್ಯದಲ್ಲಿ-ಓವರ್ ಟ್ಯಾಂಕ್ ಬಗ್ಗೆ ಹಲವಾರು ದೂರುಗಳು ಬಂದಿವೆ. ನಂತರ ಅದೇ ಅಂಚೆಪಾಳ್ಯದಲ್ಲಿ 5 ಎಕರೆ ಸರ್ಕಾರಿ ಭೋಮಿಯ ಹೊತ್ತುವರಿ ಬಗ್ಗೆ ದೂರುಗಳ ಬಂದಿದ್ದು, ಇದರ ಬಗ್ಗೆ ತನಿಖೆ ನಡೆಸಬೇಕು ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Kshetra Samachara
30/07/2022 09:16 pm