ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: "ಸಿದ್ದರಾಮಯ್ಯ ಹೇಳುವುದೆಲ್ಲ ವೇದವಾಕ್ಯವಲ್ಲ, ಮಹತ್ವ ನೀಡಬೇಕಿಲ್ಲ"; ಸಿಎಂ ಅಸಹನೆ

ಬೆಂಗಳೂರು: ಸಿದ್ಧರಾಮಯ್ಯ ಕಾಲದಲ್ಲಿ 32 ಸರಣಿ ಕೊಲೆಗಳಾಗಿದ್ದವು. ಆಗ ಅವರು ಏನು ಮಾಡುತ್ತಿದ್ದರು? ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎಲ್ಲ ವಿಷಯಗಳಲ್ಲಿ ರಾಜಕಾರಣವನ್ನು ಮಾಡಬಾರದು. ಸಿದ್ದರಾಮಯ್ಯ ಹೇಳಿಕೆಗೆ ಹೆಚ್ಚಿನ ಮಹತ್ವವಿಲ್ಲ ಎಂದು ಅಸಹನೆ ವ್ಯಕ್ತಪಡಿಸಿದರು.

ಶಾಸಕ ತನ್ವೀರ್ ಸೇಠ್ ಮೇಲೆ ಎಸ್‍ಡಿಪಿಐ ಹಾಗೂ ಪಿಎಫ್‍ಐ ಸಂಘಟನೆಯ ಸುಮಾರು 200 ಜನರನ್ನು ದಾಳಿ ನಡೆಸಿದ ಪ್ರಕರಣದಿಂದ ಅವರನ್ನು ಮುಕ್ತಗೊಳಿಸಲಾಗಿತ್ತು.

ಸಿದ್ದರಾಮಯ್ಯ ಕೇವಲ ಹೇಳಿಕೆಗಳನ್ನು ನೀಡುತ್ತಾರೆ. ಸರ್ಕಾರ ಕ್ಷಿಪ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಜನರ ಮುಂದಿವೆ. ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳಿಗೆ ಫಂಡಿಂಗ್ ಮಾಡುತ್ತಿರುವುದೇ ಬಿಜೆಪಿ ಪಕ್ಷ ಎಂಬುದು ಅತ್ಯಂತ ಹಾಸ್ಯಾಸ್ಪದ ಹೇಳಿಕೆ. ಇದು ಕಾಂಗ್ರೆಸ್ಸಿನ ರಾಜಕೀಯ ದಿವಾಳಿತನ ಬಿಂಬಿಸುತ್ತದೆ. ಸರ್ಕಾರದಲ್ಲಿ ಯಾರೂ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಇಂತಹ ಸಂದರ್ಭ ಕರ್ತವ್ಯದಿಂದ ವಿಮುಖರಾಗುವುದಿಲ್ಲ. ಗಟ್ಟಿಯಾಗಿ ನಿಂತು ಕಠಿಣ ನಿಲುವು ತೆಗೆದುಕೊಂಡು ಕೆಲಸ ಮಾಡಲಾಗುತ್ತಿದೆ ಎಂದರು.

ವರದಿ: ರಂಜಿತಾ ಸುನಿಲ್, ಪಬ್ಲಿಕ್‌ ನೆಕ್ಸ್ಟ್‌ ಬೆಂಗಳೂರು

Edited By : Nagesh Gaonkar
PublicNext

PublicNext

29/07/2022 10:17 pm

Cinque Terre

40.92 K

Cinque Terre

0

ಸಂಬಂಧಿತ ಸುದ್ದಿ