ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಜಮೀರ್ ಅಹಮ್ಮದ್ ಹೇಳಿಕೆ ವಿರುದ್ಧ ತಿರುಗಿ ಬಿದ್ದ ಒಕ್ಕಲಿಗ ಸಮುದಾಯ

ಬೆಂಗಳೂರು: ಸಿಎಂ ಯಾರಾಗಬೇಕೆಂಬ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣಗಳ ಆಂತರಿಕ ಕಲಹ ಇದೀಗ ಬಹಿರಂಗವಾಗಿದೆ. ಜಮೀರ್ ಮತ್ತು ಡಿಕೆಶಿ ಜಗಳದಲ್ಲಿ ಒಕ್ಕಲಿಗ ಸಮುದಾಯದ ಹೆಸರು ಸೇರಿಕೊಂಡಿದೆ. ಒಂದೇ ಸಮುದಾಯದವರೇ ಮುಖ್ಯಮಂತ್ರಿ ಆಗಬೇಕಾ.? ಎಂದು ಡಿಕೆಶಿ ವಿರುದ್ಧವಾಗಿ‌ ಜಮೀರ್ ಅಹ್ಮದ್ ಪರೋಕ್ಷ ಟಾಂಗ್ ನೀಡಿದ್ದರು.

ಡಿಕೆಶಿಗೆ ಟಾಂಗ್ ನೀಡುವ ಬರದಲ್ಲಿ ಜಮೀರ್ ಒಕ್ಕಲಿಗರನ್ನ ಕೆಣಕಿದ್ದಾರೆ. ಜಮೀರ್ ಹೇಳಿಕೆ ವಿರುದ್ಧ ದೇವನಹಳ್ಳಿಲಿ ಒಕ್ಕಲಿಗ ಸಮುದಾಯ ಪ್ರತಿಭಟನೆ ನಡೆಸಿದೆ. ಜಮೀರ್ ವಿರುದ್ಧ ದೇವನಹಳ್ಳಿ ತಾಲೂಕು ಸಂಘದ ಅಧ್ಯಕ್ಷ ಮಾತನಾಡಿ, ರಾಜಕೀಯ ಬರುತ್ತೆ, ಹೋಗುತ್ತೆ ಯಾರೋ ಮುಖ್ಯಮಂತ್ರಿ ಆಗ್ತಾರೆ. ಆದರೆ ಈ ಜಮೀರ್ ಅಹ್ಮದ್ ದುರಂಕಾರಿಯಾಗಿ ಮಾತನಾಡಿದ್ದಾನೆ. ಈತ ಒಕ್ಕಲಿಗ ಸಮುದಾಯದ ಕ್ಷಮೆ ಕೇಳಬೇಕು. ಇಲ್ಲವಾದರೆ ಒಕ್ಕಲೆಗರೆಲ್ಲಾ ಒಂದಾಗಿ ಪ್ರತಿಭಟನೆ ನಡೆಸಬೇಕಾಗ್ತದೆ ಎಂದು ಎಚ್ಚರಿಕೆ‌ ನೀಡಿದರು.

ಈ ವೇಳೆ ದೇವನಹಳ್ಳಿ ತಾಲ್ಲೂಕು ಒಕ್ಕಲಿಗರ ಸಂಘದ ನಿರ್ದೇಶಕರು ಪದಾಧಿಕಾರಿಗಳು ಉಪಸ್ಥಿತರಿದ್ದು, ಜಮೀರ್ ವಿರುದ್ಧ ಘೋಷಣೆ ಕೂಗಿದರು.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ದೇವನಹಳ್ಳಿ.

Edited By : Manjunath H D
PublicNext

PublicNext

26/07/2022 08:46 pm

Cinque Terre

44.86 K

Cinque Terre

0

ಸಂಬಂಧಿತ ಸುದ್ದಿ