ದೊಡ್ಡಬಳ್ಳಾಪುರ: RSS ಮತ್ತು ಜನಸಂಘಕ್ಕೆ ರಾಷ್ಟ್ರ ಧ್ವಜದ ಬಗ್ಗೆ ಗೌರವ ಇಲ್ಲ. 52 ವರ್ಷಗಳ ಕಾಲ ಅವರು RSS ಕಚೇರಿ ಮೇಲೆ ತ್ರಿವರ್ಣ ಧ್ವಜ ಹಾರಿಸಿರಲಿಲ್ಲ. ಚೀನಾದಿಂದ ಪಾಲಿಸ್ಟರ್ ತ್ರಿವರ್ಣ ಧ್ವಜ ತರಿಸೋ ಮೂಲಕ ಕೇಂದ್ರ ಸರ್ಕಾರ ರಾಷ್ಟ್ರದ್ರೋಹ ಕೆಲಸ ಮಾಡುತ್ತಿದೆ ಎಂದು ವಿಧಾನಪರಿಷತ್ ವಿರೋಧಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್ ಸೇವಾದಳದ ವತಿಯಿಂದ ನಗರದ ಬೆಸೆಂಟ್ ಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ತರಬೇತಿ ಶಿಬಿರದ ಭಾಗವಾಗಿ ನಗರದ ನೆಲದಾಂಜನೇಯಸ್ವಾಮಿ ದೇಗುಲದ ಬಳಿಯಿಂದ ತಾಲೂಕು ಕಚೇರಿವರೆಗೆ ಪಂಥ ಸಂಚಲನ ನಡೆಸಿದರು. ಈ ವೇಳೆ ಮಾತನಾಡಿದ ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್.ನ್ಯಾಷನಲ್ ಹೆರಾಲ್ಡ್ ಪ್ರಕರಣದ ಹೆಸರಿನಲ್ಲಿ ಕೇಂದ್ರ ಸರಕಾರ ಸಾಂವಿಧಾನಿಕ ಸಂಸ್ಥೆ ಜಾರಿ ನಿರ್ದೇಶನಾಲಯವನ್ನು ದುರುಪಯೋಗ ಮಾಡಿಕೊಂಡು, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ರಾಹುಲ್ ಗಾಂದಿ ಅವರಿಗೆ ವಿಚಾರಣೆ ನೆಪದಲ್ಲಿ ಕಿರುಕುಳ ನೀಡುತ್ತಿದೆ ಎಂದರು,
ಕಾಂಗ್ರೆಸ್ ಪಕ್ಷದ ಪೂರ್ವಜರು ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿ ಹುತಾತ್ಮರಾಗಿದ್ದಾರೆ. ಸ್ವಾತಂತ್ರ್ಯಕ್ಕಾಗಿ ಬಿಜೆಪಿಯ ಯಾವೊಬ್ಬ ನಾಯಕ ಕೂಡ ಹೋರಾಟ ಮಾಡಿಲ್ಲ. ಬ್ರಿಟಿಷರ ಗುಲಾಮರಂತೆ ಕೆಲಸ ಮಾಡಿದವರು ಬಿಜೆಪಿಯವರು.
ಬ ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವೆ ಎಂದು ವಚನ ನೀಡಿದ್ದರು.
ಆದರೆ ಎಂಟು ವರ್ಷ ಕಳೆದರೂ ಕೇವಲ ೪೦ ಲಕ್ಷ ಉದ್ಯೋಗ ಸೃಷ್ಟಿಸಿದ್ದಾರೆ. ಅಗ್ನಿಪಥ್ ಹೆಸರು ಹೇಳಿ ಯುವಕರನ್ನು ದಾರಿತಪ್ಪಿಸುತ್ತಿದ್ದಾರೆ. ರಾಷ್ಟ್ರದ ಪ್ರಮುಖ ಆಸ್ತಿ, ಉದ್ದಿಮೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡುತ್ತಿರುವುದು ಮಾತ್ರವೇ ಮೋದಿಯ ಸಾಧನೆಯಾಗಿದೆ. ರಾಜ್ಯದಲ್ಲಿ ಆಪರೇಷನ್ ಕಮಲ ಮೂಲಕ ಅಧಿಕಾರಕ್ಕೆ ಬಂದು ಜನರ ರಕ್ತ ಹಿರುತ್ತಿದ್ದಾರೆ. ಇದಕ್ಕೆ ಸಾಕ್ಷಿ 40 % ಕಮಿಷನ್ ದಂಧೆಯಾಗಿದೆ. ಎಲ್ಲಾ ಕ್ಷೇತ್ರದಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.
ಜನಸಂಘವಾಗಲಿ, ಆರ್.ಎಸ್.ಎಸ್ ಅವರಿಗಾಗಲಿ ತ್ರಿವರ್ಣ ಧ್ವಜದ ಬಗ್ಗೆ ಗೌರವ ಇರಲಿಲ್ಲ. ಸುಮಾರು 52 ವರ್ಷಗಳ ಕಾಲ ಆರ್.ಎಸ್.ಎಸ್ ಕಚೇರಿಯಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರಲಿಲ್ಲವೆಂದು ಆರೋಪಿಸಿದ ಅವರು, ತ್ರಿವರ್ಣ ಧ್ವಜವನ್ನು ಅಪಮಾನಿಸಲು ಪಾಲಿಸ್ಟರ್ ದ್ವಜ ಬಳಕೆಗೆ ಮೂಲಕ ಮುಂದಾಗಿದ್ದಾರೆ. ಭಾರತದ ದೇಶದ ಭೂ ಭಾಗವನ್ನು ವಶಪಡಿಸಿಕೊಂಡಿರುವ ಚೀನಾದಿಂದ ಪಾಲಿಸ್ಟರ್ ಧ್ವಜವನ್ನು ತರಿಸುವ ರಾಷ್ಟ್ರ ದ್ರೋಹದ ಕೆಲಸವನ್ನು ಕೇಂದ್ರದ ಬಿಜೆಪಿ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
PublicNext
26/07/2022 08:26 am