ವರದಿ- ಗೀತಾಂಜಲಿ
ಬೆಂಗಳೂರು: ಸಿದ್ದರಾಮಯ್ಯ ಸಿಎಂ ಆಗಬೇಕು ಎಂದು ನಾನು ಈಗಲೂ ಹೇಳುತ್ತೇನೆ. ಆದರೆ ಯಾವುದೇ ಒಂದು ಸಮುದಾಯ ನಂಬಿಕೊಂಡು ಸಿಎಂ ಆಗಲು ಸಾಧ್ಯವಾಗುವುದಿಲ್ಲ ಎಂದು KPCC ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ಶಾಸಕ ಜಮೀರ್ ಅಹಮ್ಮದ್ ಖಾನ್ ತಿರುಗೇಟು ನೀಡಿದ್ದಾರೆ.
ನಾನಷ್ಟೇ ಅಲ್ಲ. ರಾಜ್ಯದ ಜನ ಸಿದ್ದರಾಮಯ್ಯನವರ ಕಾರ್ಯಕ್ರಮವನ್ನು ಮೆಚ್ಚಿಕೊಂಡಿದ್ದಾರೆ. ಅವರು ಸಿಎಂ ಆಗಬೇಕು ಎಂದು ಬಯಸುತ್ತಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಬೇಕು ಅಂತ ನಾನೂ ಹೇಳುತ್ತೇನೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಡಿಕೆಶಿ ಒಕ್ಕಲಿಗರ ಓಲೈಕೆ ಮಾಡುತ್ತಿರಬಹುದು ಯಾವುದೇ ಒಂದು ಸಮುದಾಯ ನಂಬಿಕೊಂಡು ಸಿಎಂ ಆಗಲು ಸಾಧ್ಯವಾಗುವುದಿಲ್ಲ. ನನಗೂ ಸಿಎಂ ಆಗುವ ಆಸೆ ಇದೆ.
ಆದರೆ ಅಲ್ಪಸಂಖ್ಯಾತ ಸಮುದಾಯ ಒಂದೇ ನಂಬಿಕೊಂಡು ನಾನು ಸಿಎಂ ಆಗುವುದಕ್ಕೆ ಆಗುವುದಿಲ್ಲ. ಎಲ್ಲಾ ಸಮುದಾಯಗಳು ಬೇಕು. ಸಿದ್ದರಾಮಯ್ಯ ಸಿಎಂ ಆಗಬೇಕು. ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರಲ್ಲಿ ಯಾರು ಸಿಎಂ ಆಗಬೇಕು ಅಂದರೆ ನಾನು ಪಕ್ಷದ ಪರ ನಿಲ್ಲುತ್ತೇನೆ ಎಂದಿದ್ದಾರೆ.
Kshetra Samachara
21/07/2022 04:37 pm