ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸೋನಿಯಾ ಗಾಂಧಿಗೆ ಇ.ಡಿ. ನೋಟಿಸ್ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ವರದಿ: ಗೀತಾಂಜಲಿ

ಬೆಂಗಳೂರು: ಕೈ ನಾಯಕಿ ಸೋನಿಯಾ ಗಾಂಧಿಗೆ ಇ.ಡಿ. ನೋಟಿಸ್ ನೀಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಕಾರ್ಯಕರ್ತರು ಫ್ರೀಡಂ ಪಾರ್ಕ್ ನಲ್ಲಿ ಇಂದು ಧರಣಿ ನಡೆಸಿದರು.

ಈ ಸಂದರ್ಭ ಯಾವುದೇ ಅಹಿತಕರ ಘಟನೆ ನಡೆಯದಂತೆ ಖಾಕಿ ಕಣ್ಗಾವಲಿದ್ದು, ಭದ್ರತೆಗಾಗಿ ಐವರು ಎಸಿಪಿ,15 ಇನ್ಸ್ ಪೆಕ್ಟರ್ ಗಳನ್ನು ನೇಮಕ ಮಾಡಲಾಗಿದೆ. ಇನ್ನು, 30 ಮಂದಿ ಪಿಎಸ್ಐ, 600 ಕಾನ್‌ ಸ್ಟೇಬಲ್ಸ್‌ ಸೇರಿದಂತೆ 5 ಕೆಎಸ್ ಆರ್ ಪಿ ತುಕಡಿಯೂ ಇದೆ.

ಟ್ರಾಫಿಕ್ ನಿಯಂತ್ರಣಕ್ಕೆ 60 ಮಂದಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಧರಣಿ ತೀವ್ರ ಸ್ವರೂಪ ಪಡೆಯುತ್ತಿದಂತೆಯೇ ಪೊಲೀಸರು ನಿಯಂತ್ರಿಸುವ ಕೆಲಸ ಮಾಡಿದ್ದಾರೆ. ಇದೇ ವೇಳೆ ಇ.ಡಿ. ನೋಟಿಸ್ ಬಗ್ಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಎಲ್ಲ ಸುಳ್ಳು ಆರೋಪಗಳು. ವಿರೋಧ ಪಕ್ಷದ ಪಿತೂರಿ ಎಂದು ಕಿಡಿಕಾರಿದರು.

Edited By :
PublicNext

PublicNext

21/07/2022 01:29 pm

Cinque Terre

25.85 K

Cinque Terre

0

ಸಂಬಂಧಿತ ಸುದ್ದಿ