ಬೆಂಗಳೂರು: ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಜೀರೋ ಪರ್ಸೆಂಟ್ ಇದ್ದ ಟ್ಯಾಕ್ಸ್ ಈಗ ಐದು ಪರ್ಸೆಂಟ್ ಆಗ್ತಿದೆ. ನಿರಂಕುಶ ಅಧಿಕಾರ, ಪ್ರಭುತ್ವ ಮೋದಿಯದ್ದು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಇದರ ವಿರುದ್ಧ ಪ್ರತಿಭಟನೆ ಮಾಡ್ತೇವೆ ಎಂದು ಮೊಯ್ಲಿ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಕಾಂಗ್ರೆಸ್ ಕಚೇರಿಯಲ್ಲಿ ಇದೇ ತಿಂಗಳ 21ರಂದು ನಡೆಯಲಿರುವ ರಾಜಭವನ ಚಲೋ ಕಾರ್ಯಕ್ರಮದ ಪೂರ್ವಬಾವಿ ಸಭೆಯಲ್ಲಿ ಮಾತನಾಡಿದರು.
ಜೊತೆಗೆ ರಾಜ್ಯ ಸರ್ಕಾರ ಒಂದು ವರ್ಷದ ಸಾಧನಾ ಸಮಾವೇಶದ ಬಗ್ಗೆ ಪ್ರತಿಕ್ರಿಯಿಸಿ, ಅವರು ಏನಂತಾ ಸಮಾವೇಶ ಮಾಡ್ತಾರೆ!? ಒಂದು ಕೈಗಾರಿಕೆ ತಂದಿದ್ದಾರಾ?ರಾಜ್ಯದಲ್ಲಿ ಶಾಂತಿ ಇದೆಯಾ!? ಕಾನೂನು ಸುವ್ಯವಸ್ಥೆ ಇದೆಯಾ!? ಏತಕ್ಕಾಗಿ ಈ ಸಮಾವೇಶ ಎಂದು ವ್ಯಂಗ್ಯವಾಡಿದರು.
- ಸುರೇಶ್ ಬಾಬು 'ಪಬ್ಲಿಕ್ ನೆಕ್ಸ್ಟ್' ಯಲಹಂಕ
PublicNext
19/07/2022 08:32 pm