ವರದಿ- ಗಣೇಶ್ ಹೆಗಡೆ
ಬೆಂಗಳೂರು: ಕಾಂಗ್ರೆಸ್ ಶಾಸಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಪರಮಾಪ್ತ ಬೈರತಿ ಸುರೇಶ್ ರನ್ನು ಬಿಜೆಪಿ ಶಾಸಕರು ಕಿಚಾಯಿಸಿದ ಪ್ರಸಂಗ ವಿಧಾನ ಸೌಧದಲ್ಲಿ ಜರುಗಿತು.
ಉತ್ತರ ಕರ್ನಾಟಕದ ಬಿಜೆಪಿ ಶಾಸಕ ರಾಜುಗೌಡ ನಾಯಕ, ರೇಣುಕಾಚಾರ್ಯ, ಗೂಳಿಹಟ್ಟಿ ಶೇಖರ್ ಕೇಸರಿ ಶಾಲನ್ನು ಕೈ ಶಾಸಕ ಬೈರತಿ ಸುರೇಶ್ ಗೆ ಹಾಕಿದರು. ಬಲವಂತವಾಗಿ ಕೇಸರಿ ಶಾಲು ಹಾಕುತ್ತಿದ್ದಂತೆ ಇರುಸು-ಮುರಿಸಾದ ಸುರೇಶ್ ಶಾಲು ತೆಗೆದುಕೊಳ್ಳಲು ಮುಂದಾದರು.
ಆ ಸಂದರ್ಭದಲ್ಲಿ ಹಲವರು ನಗೆಗಡಲಲ್ಲಿ ತೇಲಾಡಿದರು. ಬೇಡಣ್ಣ ಬೇಡಣ್ಣ ಅಂತಾಲೇ ಹಾಕಿದ ಕೇಸರಿ ಶಾಲನ್ನು ಶಾಸಕ ಸುರೇಶ್ ತೆಗೆದರು.
PublicNext
18/07/2022 11:07 pm