ದೊಡ್ಡಬಳ್ಳಾಪುರ: ವಿಧಾನಸಭಾ ಚುನಾವಣೆ ಬಂದಿದ್ದೆ ತಡ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ಜೆಡಿಎಸ್ ನಾಯಕರು ದೊಡ್ಡಬಳ್ಳಾಪುರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿಯೆಂದು ಪ್ರಚಾರ ಮಾಡುತ್ತಾ ಕ್ಷೇತ್ರದ ಮತದಾರರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ವಲಸೆ ನಾಯಕರರಿಂದ ಕ್ಷೇತ್ರದಲ್ಲಿ ಭಿನ್ನಮತ ಭುಗಿಲೆದ್ದಿದೆ.
ಮಾಜಿ ಕೇಂದ್ರ ಸಚಿವ ಜಾಲಪ್ಪನವರ ಕಾಲದಲ್ಲಿ ದೊಡ್ಡಬಳ್ಳಾಪುರ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿತ್ತು. ಆದರೆ ಜಾಲಪ್ಪ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಮೇಲೆ ಕ್ಷೇತ್ರದಲ್ಲಿ ಜೆಡಿಎಸ್ ಪ್ರಭಾವ ಗಣನೀಯವಾಗಿ ಕುಸಿದಿದೆ. ಜೆಡಿಎಸ್ ನಾಯಕರ ಒಳಜಗಳ ಸಹ ಜೆಡಿಎಸ್ ಪಕ್ಷದ ಪತನಕ್ಕೆ ಕಾರಣವಾಗಿದೆ. ಇದರ ಜೊತೆ ಕ್ಷೇತ್ರಕ್ಕೆ ಸಂಬಂಧವೇ ಇಲ್ಲದ ಅಪ್ಪಯ್ಯಣ್ಣ, ಹರೀಶ್ ಗೌಡ ಮತ್ತು ರಮೇಶ್ ಗೌಡರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯೆಂದು ಪ್ರಚಾರ ಪಡೆಯುತ್ತಿದ್ದಾರೆ, ಇದು ಕ್ಷೇತ್ರದ ಮತದಾರರ ಗೊಂದಲಕ್ಕೆ ಕಾರಣವಾಗಿದ್ದು. ಸಮಾನ ಮನಸ್ಕ ಜೆಡಿಎಸ್ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ವಲಸೆ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.
ಕ್ಷೇತ್ರದಲ್ಲಿ ಮುನೇಗೌಡ ಮತ್ತು ಅಪ್ಪಯ್ಯಣ್ಣರವರ ಎರಡು ಬಣಗಳಿದ್ದು, ಒಬ್ಬರನ್ನ ಕಂಡರೇ ಒಬ್ಬರಿಗೆ ಆಗದಷ್ಟು ದ್ವೇಷ, ವಿಧಾನಸಭಾ ಚುನಾವಣೆಯಲ್ಲಿ ಮುನೇಗೌಡ ಮೂರು ಸೋತ ನಂತರ ಪಕ್ಷದಲ್ಲಿ ಸೈಡ್‌ಲೈನ್ ಆಗುತ್ತಿದ್ದಾರೆ. ಪಕ್ಷದ ಕ್ಷೇತ್ರದ ಅಪ್ಪಯ್ಯಣ್ಣ ಕ್ಷೇತ್ರದಲ್ಲಿ ತಮ್ಮ ರಾಜಕೀಯ ಆಟ ಪ್ರಾರಂಭಿಸಿದ್ದಾರೆ, ಸ್ವಂತಹ ಅಭ್ಯರ್ಥಿಯಾಗದ ಇವರು ಹರೀಶ್ ಗೌಡ ಮತ್ತು ರಮೇಶ್ ಗೌಡರನ್ನ ಕರೆತಂದು ಜೆಡಿಎಸ್ ಅಭ್ಯರ್ಥಿಗಳೆಂದು ಪ್ರಚಾರ ಮಾಡುತ್ತಿದ್ದಾರೆ ಇದು ಕ್ಷೇತ್ರದ ಜೆಡಿಎಸ್ ನಾಯಕರ ಅಕ್ರೋಶಕ್ಕೆ ಕಾರಣವಾಗಿದೆ.
ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಜೆಡಿಎಸ್ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಹಿಡಿದಿದೆ. ಅಧಿಕಾರ ಹಂಚಿಕೆ ಹಂಚಿಕೆ ಕುರಿತು ಕುಮಾರಸ್ವಾಮಿಯವರ ಬಿಡದಿ ತೋಟದ ಮನೆಯಲ್ಲಿ ಚರ್ಚೆ ಮಾಡಲಾಗಿದ್ದು. 3 ಭಾರಿ ನಗರಸಭಾ ಸದಸ್ಯರಾದ ವಡ್ಡರಹಳ್ಳಿ ರವಿಯವರಿಗೆ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮಾಡುವ ತಿರ್ಮಾನ ಮಾಡಲಾಗಿತ್ತು, ಆದರೆ ಏಕಾಏಕಿ ಬಂದ ಅಪ್ಪಯ್ಯಣ್ಣ ಗ್ಯಾಂಗ್ ಆದಿಲಕ್ಷ್ಮೀಯರನ್ನ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿ ಮಾಡಿದೆ. ಈ ಮೂಲಕ ವರಿಷ್ಠರ ಮಾತಿಗೂ ಬೆಲೆ ಕೊಡದೆ ಸರ್ವಾಧಿಕಾರಿ ವರ್ತನೆ ತೋರಿದ್ದಾರೆಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಸಮಾನ ಮನಸ್ಕ ಜೆಡಿಎಸ್ ಮುಖಂಡರು.
ವಲಸೆ ನಾಯಕರಿಗೆ ಎಚ್ಚರಿಕೆ ನೀಡಿರುವ ಸಮಾನ ಮನಸ್ಕ ನಾಯಕರು ನಿಮ್ಮ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಕಟ್ಟಿ ಬೆಳಸಿ, ಕ್ಷೇತ್ರದಲ್ಲಿ ನಿಮಗಿಂತ ನೂರುಪಟ್ಟು ನಿಷ್ಠಾವಂತ ಕಾರ್ಯಕರ್ತರಿದ್ದಾರೆ ಮತ್ತೆ ಕ್ಷೇತ್ರದಲ್ಲಿ ಜೆಡಿಎಸ್ ಬಾವುಟ ಹಾರಿಸುವುದಾಗಿ ಎಚ್ಚರಿಕೆ ನೀಡಿದರು.
PublicNext
18/07/2022 08:33 pm