ಹೊಸಕೋಟೆ : ಬೆಂಗಳೂರು ಗ್ರಾಮಾಂತರ ಜಿಲ್ಲೆ ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾದದ್ದು. ಇಲ್ಲಿ ಬಚ್ಚೇಗೌಡ ಹಾಗೂ ಎಂಟಿಬಿ ನಾಗರಾಜ್ ಪೈಪೋಟಿಗೆ ಬಿದ್ದು ಆರೋಪ ಪ್ರತ್ಯಾರೋಪ ಮಾಡಿಕೊಳ್ತಾರೆ.
ಇಂದು ಹೊಸಕೋಟೆ ಕಾರ್ಯಕ್ರಮದಲ್ಲಿ ಸಚಿವ ಎಂಟಿಬಿ ನಾಗರಾಜ್ ಸರ್ಕಾರಿ ಜಮೀನು ಒತ್ತುವರಿದಾರರ ವಿರುದ್ಧ ವಾಗ್ದಾಳಿ ನಡೆಸಿದರು. ಶರತ್ ಬಚ್ಚೇಗೌಡ ಕುಟುಂಬವೂ ವೇದಿಕೆ ಹಂಚಿಕೊಂಡಿತ್ತು. ಇದೇ ವೇಳೆ ಹೊಸಕೋಟೆಲಿ 500 ಎಕರೆ ಸರ್ಕಾರಿ ಭೂಮಿನ ಒತ್ತುವರಿ ಮಾಡಿಕೊಂಡಿದೆ. ತಾಕತ್ತಿದ್ದರೆ 500 ಕೋಟಿ ಬೆಲೆ ಭೂಮಿನ ವೇದಿಕೆಯಲ್ಲಿ ಇದ್ದವರು ವಾಪಸ್ ನೀಡ್ತಾರಾ.!? ಎಂದು MTB ನಾಗರಾಜ್ ಶರತ್ ಬಚ್ಚೇಗೌಡರಿಗೆ ಸವಾಲು ಹಾಕಿದರು.
ಹೊಸಕೋಟೆ ತಾಲೂಕಿನ ಶಾಂತನುಪುರ ಸರ್ವೆ ನಂಬರ್ 29 ರಲ್ಲಿ 269 ಎಕರೆ ಸರ್ಕಾರಿ ಜಮೀನಿದೆ. ಇದು ಕೃಷಿಯೋಗ್ಯವಲ್ಲದ ಭೂಮಿ. ಸದ್ಯ ಇಲ್ಲಿ ಎಕರೆಗೆ ಒಂದು ಕೋಟಿ ಬೆಲೆ ಇದೆ. ಒಟ್ಟು ಹೊಸಕೋಟೆ ತಾಲೂಕಿನಲ್ಲಿ 500 ಕೋಟಿ ಬೆಲೆಯ 500 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಇಂದಲ್ಲ ನಾಳೆ ಈ ಸರ್ಕಾರಿ ಜಾಗ ಸರ್ಕಾರಕ್ಕೆ ಸೇರಬೇಕು. ಯಾವ ಕಾರಣಕ್ಕೂ ಈ ಜಮೀನಿನ್ನು ಬಿಡಲ್ಲ ಎಂದರು..
ಸರ್ಕಾರಿ ಜಾಗದ ಕೇಸ್ ಯಾವಾಗ ACB ಗೆ ಹೋಯ್ತೊ ಬಚ್ಚೇಗೌಡರು ಸಿವಿಲ್ & ಹೈಕೋರ್ಟ್ಗೆ ಹೋಗಿ ಸ್ಟೇ ತೆಗೆದುಕೊಂಡಿದ್ದಾರೆ. ಇನ್ನು ಈ ಬಗ್ಗೆ ಶರತ್ ಬಚ್ಚೇಗೌಡರನ್ನ ಪಬ್ಲಿಕ್ ನೆಕ್ಸ್ಟ್ ಮಾತನಾಡಿಸಲು ಯತ್ನಿಸಿದರೆ, ಅವರು ಪ್ರತಿಕ್ರಿಯೆಗೆ ನಿರಾಕರಿಸಿದ್ರು. ಅದೇನೆ ರಾಜಕಾರಣ ಇರಲಿ ಸರ್ಕಾರಿ ಜಾಗವನ್ನ ಯಾರೇ ಒತ್ತುವರಿ ಮಾಡಿಕೊಂಡಿದ್ರು ಅದು ಸರ್ಕಾರದ ವ್ಯಾಪ್ತಿಗೆ ಬರಲಿ. ಇನ್ನು ಎಂಟಿಬಿ ಆರೋಪಕ್ಕೆ ಶರತ್ ಬಚ್ಚೇಗೌಡರು ಹೇಗೆ ಪ್ರತಿಕ್ರಿಯಿಸುತ್ತಾರೋ ನೋಡಬೇಕಿದೆ.
PublicNext
16/07/2022 07:54 pm