ವರದಿ- ಬಲರಾಮ್ ವಿ
ಬೆಂಗಳೂರು : ಎರಡೂ ಮೂರು ವರ್ಷಗಳಿಂದ ಬಿಬಿಎಂಪಿ ಅಧಿಕಾರಿಗಳು ತರಕಾರಿ ವ್ಯಾಪಾರಿಗಳ ಬಳಿ ಯಾವುದೇ ಸುಂಕ ಕಟ್ಟಿಸಿಕೊಳ್ಳದೇ ಸರ್ಕಾರದ ಬೊಕ್ಕಸಕ್ಕೆ ನಷ್ಟವುಂಟು ಮಾಡುತ್ತಿದ್ದಾರೆಂದು ಅಖಿಲ ಕರ್ನಾಟಕ ರೈತರು ಮತ್ತು ವ್ಯಾಪಾರಿಗಳ ಒಕ್ಕೂಟದಿಂದ ಮಹದೇವಪುರ ವಲಯದ ಬಿಬಿಎಂಪಿ ಕಚೇರಿಯ ಎದುರು ದಿಂಬು ಹಾಗೂ ಹಾಸಿಗೆ ಹಿಡಿದು ಪ್ರತಿಭಟನೆ ನಡೆಸಿದರು.
ಕೆಆರ್ ಪುರದ ಸಂತೆ ಮೈದಾನದಿಂದ ಮಹದೇವಪುರ ವಲಯ ಬಿಬಿಎಂಪಿ ಕಚೇರಿಯವರೆಗೆ ಕಾಲ್ನಡಿಗೆ ಜಾಥಾ ನಡೆಸಲಾಯಿತು. ಇನ್ನು ಜಾಥಾ ನೇತೃತ್ವ ವಹಿಸಿ ಬಳಿಕ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಎಲೆ ಶ್ರೀನಿವಾಸ ಅವರು ಕೆಆರ್ ಪುರದ ಸಂತೆ ಮೈದಾನದಲ್ಲಿ ಬಿ.ಡಿ.ಎ ವತಿಯಿಂದ ನಿರ್ಮಿಸಲಾಗುತ್ತಿರುವ ಕಟ್ಟಡ ಕಾಮಗಾರಿ ಕುಂಠಿತವಾಗಿದೆ.
ಅಧಿಕಾರಿಗಳು ವ್ಯಾಪಾರಸ್ಥರ ಬಳಿ ಸುಂಕವನ್ನು ಕಟ್ಟಿಸಿಕೊಳ್ಳಬೇಕು ಎಂದರು. ಬಿಡಿಎ ವತಿಯಿಂದ ನಿರ್ಮಿಸಲಾಗುತ್ತಿರುವ ಕಟ್ಟಡದಲ್ಲಿ ಕೆಆರ್ ಪುರ ಸಂತೆಯ ಸುಮಾರು ವರ್ಷಗಳಿಂದ ನೆಲೆಸಿರುವ ವ್ಯಾಪಾರಿಗಳಿಗೆ ಮಾತ್ರ ನೀಡುವಂತೆ ಮನವಿ ಸಲ್ಲಿಸಿದರು.
ಕಾಣದ ಕೈಗಳು ನ್ಯಾಯಲಯಕ್ಕೆ ಸುಳ್ಳು ದಾಖಲೆ ಒದಗಿಸಿ ತಡೆಯಾಜ್ಞೆ ತಂದಿದ್ದಾರೆಂದು ಆರೋಪಿಸಿದರು. ಅಷ್ಟೇ ಅಲ್ಲದೆ ಅಧಿಕಾರಿಗಳು ನಿಷ್ಠೆಯಿಂದ ಕಾರ್ಯನಿರ್ವಹಿಸಲು ಜನಪ್ರತಿನಿಧಿಗಳು ಬೀಡಬೇಕು ಎಂದು ತಿಳಿಸಿದರು. ಪ್ರತಿಭಟನೆಯಲ್ಲಿ ನೂರಾರು ಸಣ್ಣಪುಟ್ಟ ವ್ಯಾಪಾರಿಗಳು ಹಾಸಿಗೆ ಮತ್ತು ದಿಂಬುವಿನೊಂದಿಗೆ ಭಾಗವಹಿಸಿದ್ದರು.
PublicNext
15/07/2022 10:47 pm