ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು:ಪಾಪ ಸಿದ್ಧರಾಮಯ್ಯ:ತುಸು‌ನಕ್ಕ ಬಸವರಾಜ ಬೊಮ್ಮಾಯಿ!

ರಿಪೋರ್ಟ್- ರಂಜಿತಾಸುನಿಲ್..

ಬೆಂಗಳೂರು: ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಪೊಲೀಸ್ ನೇಮಕಾತಿಗೆ ಸಂಬಂಧಿಸಿದ ನೇಮಕಾತಿ ಸಮಿತಿಯ ಮುಖ್ಯಸ್ಥರೇ ಆರೋಪಿಯಾಗಿದ್ದರು. ದಕ್ಷ ಆಡಳಿತ ನೀಡಿದ್ದೇವೆ ಎಂದು ಹೇಳಿಕೊಂಡ ಸಿದ್ದರಾಮಯ್ಯನವರ ಸರ್ಕಾರ ಎಫ್ ಐ ಆರ್ ನಲ್ಲಿ ಹೆಸರು ಬಂದ ನಂತರ ಸಿಐಡಿಗೆ ತನಿಖೆಯನ್ನು ಒಪ್ಪಿಸಿ ಪ್ರಕರಣವನ್ನು ಮುಚ್ಚಿಹಾಕಿದರು ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಟೀಕಿಸಿದರು.

ಪಿಯುಸಿ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳನ್ನು ಪಾಸು ಮಾಡಿಕೊಡುವುದಾಗಿ ಹೇಳಿ 18 ಕೋಟಿ ರೂ.ಗಳನ್ನು ವಸೂಲು ಮಾಡಿದ ಪ್ರಕರಣವೂ ಎಫ್ ಐ ಆರ್ ನಂತರ , ಸಿಐಡಿ ತನಿಖೆಯನ್ನು ವಹಿಸಿ ಪ್ರಕರಣವನ್ನು ಮುಚ್ಚಿಹಾಕಿದರು. ತಮ್ಮ ತಪ್ಪನ್ನು ಮರೆಮಾಚಲು ಇಂತಹ ಹೇಳಿಕೆಗಳನ್ನು ಅವರು ನೀಡುತ್ತಿದ್ದಾರೆ. ಆ ಸಂದರ್ಭದಲ್ಲಿ ವಿರೋಧಪಕ್ಷದಲ್ಲಿದ್ದ ನಾವು ಈ ಬಗ್ಗೆ ಸದನದಲ್ಲಿ ಪ್ರಶ್ನಿಸಿದರೂ ಯಾವುದೇ ಸ್ಪಂದನೆ ತೋರದ ಹಾಗೂ ಮುಚ್ಚಿಹಾಕುವ ಸರ್ಕಾರವಾಗಿತ್ತು ಎಂದು ಬಸವರಾಜ್ ಬೊಮ್ಮಾಯಿ ತಿಳಿಸಿದರು.

ಪ್ರಥಮ ಬಾರಿಗೆ ತಪ್ಪು ಮಾಡಿದ ದೊಡ್ಡ ಅಧಿಕಾರಿಯನ್ನು ನಮ್ಮ ಸರ್ಕಾರ ಪ್ರಶ್ನಿಸಿ, ಕೇವಲ ಇಲಾಖಾ ವಿಚಾರಣೆ ಅಮಾನತ್ತು ಮಾತ್ರವಲ್ಲ, ಬಂಧಿಸಿ ತನಿಖೆಯನ್ನೂ ಮಾಡಲಾಗುತ್ತಿದೆ ಎಂದು ವಿವರಿಸಿದರು ಸಿಎಂ ಬೊಮ್ಮಾಯಿ.

Edited By : Nagesh Gaonkar
Kshetra Samachara

Kshetra Samachara

06/07/2022 10:36 pm

Cinque Terre

3.57 K

Cinque Terre

0

ಸಂಬಂಧಿತ ಸುದ್ದಿ