ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮೇಲಿನ ಎಸಿಬಿ ದಾಳಿ ಖಂಡಿಸಿ ಕೆಲ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ರು. ಮುಂಜಾನೆಯಿಂದ ಜಮೀರ್ ಮನೆ ಮುಂದೆ ಜಮಾಯಿಸಿದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಪದೇ ಪದೆ ಜಮೀರ್ ರನ್ನು ಸರ್ಕಾರ ಟಾರ್ಗೆಟ್ ಮಾಡ್ತಿದೆ. ಈ ಹಿಂದೆ ಇ.ಡಿ. ದಾಳಿ ನಡೆದಿದ್ರೂ ಈಗ ಎಸಿಬಿ ದಾಳಿ ನಡೆಸಿದೆ. ಇದ್ರ ಹಿಂದೆ ಬಿಜೆಪಿ ಕೈವಾಡ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಬಿಜೆಪಿ ವಿರುದ್ಧ ಘೋಷಣೆ ಕೂಗಿದ್ರು.
ಪ್ರತಿಭಟನೆ ವೇಳೆ ಜಮೀರ್ ಅಭಿಮಾನಿಯೊಬ್ಬ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಸೀನ್ ಕೂಡ ಕ್ರಿಯೇಟ್ ಮಾಡಿದ್ದ. ಕ್ಯಾನ್ ನಲ್ಲಿ ತಂದ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಮುಂದಾದಾಗ ಆತನಿಂದ ಪೆಟ್ರೋಲ್ ಮತ್ತು ಬೆಂಕಿ ಪೊಟ್ಟಣ ಕಸಿದುಕೊಂಡ ಪೊಲೀಸ್ರು ಆತನನ್ನು ವಶಕ್ಕೆ ಪಡೆದರು.
PublicNext
05/07/2022 04:19 pm