ಬೆಂಗಳೂರು: ಈ ಮೊದಲು ಬಿಜೆಪಿ ಅಜೆಂಡಾ ಕಾಂಗ್ರೆಸ್ ಮುಕ್ತ ದೇಶ ಎಂದಾಗಿತ್ತು. ಆದರೀಗ ಸ್ಲೋಗನ್ ಬದಲಾಗಿದೆ. ದೇಶದ ಪರಿವಾರ, ಪ್ರಾದೇಶಿಕ ಸರ್ಕಾರ, ಪಕ್ಷಗಳನ್ನು ಮುಗಿಸುವುದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ದೇವನಹಳ್ಳಿಯಲ್ಲಿ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ರಾಜ್ಯ ಹಾಗೂ ದೇಶದಲ್ಲೂ ಭ್ರಷ್ಟಾಚಾರ ಜೋರಾಗಿ ನಡೆಯುತ್ತಿದೆ. ಬಿಜೆಪಿ ಈಗ ಏನ್ ಮಾಡ್ತಿದೆ. ಚುನಾಯಿತ ಸರ್ಕಾರಗಳನ್ನು ಹೇಗಂದ್ರೆ ಹಾಗೆ ಅಸ್ಥಿರಗೊಳಿಸುತ್ತಿದೆ. ಇದು ಡೆಮಾಕ್ರಸಿನಾ ? ಬಿಜೆಪಿ ಕಾರ್ಯಕಾರಿಣಿಲಿ ಕುಟುಂಬ ರಾಜಕಾರಣ ಬಗ್ಗೆ ಮಾತನಾಡ್ತೀರಾ !? ದಕ್ಷಿಣ ಭಾರತದಲ್ಲಿ ಬಾಗಿಲು ತೆಗೆಯಬೇಕು ಅಂತ ತಮಿಳುನಾಡು, ಆಂಧ್ರ, ಒರಿಸ್ಸಾದಲ್ಲಿ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಹೊರಟಿದ್ದೀರಾ.
ದೇವನಹಳ್ಳಿಲಿ ದೇವಸ್ಥಾನದ ಉದ್ಘಾಟನೆಗೆಂದು ಆಗಮಿಸಿದ ಸಂದರ್ಭ ಕುಮಾರಸ್ವಾಮಿಯವರು, ರಾಜ್ಯ ಹಾಗೂ ಕೇಂದ್ರದ ಡಬಲ್ ಇಂಜಿನ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
- ಸುರೇಶ್ ಬಾಬು ʼಪಬ್ಲಿಕ್ ನೆಕ್ಸ್ಟ್ʼ ದೇವನಹಳ್ಳಿ
PublicNext
04/07/2022 10:19 pm