ಆನೇಕಲ್: ಹೀಗೆ ಕೈಯಲ್ಲಿ ಭಿತ್ತಿ ಪತ್ರಗಳನ್ನ ಹಿಡಿದು ತಮ್ಮ ಗ್ರಾಮದ ಕೆರೆಯನ್ನ ಉಳಿಸಿ ಎಂದು ಪ್ರತಿಭಟನಾ ಜಾಥಾದಲ್ಲಿ ಜನ ಹೆಜ್ಜೆ ಹಾಕಿದ ದೃಶ್ಯ ಕಂಡು ಬಂದಿದ್ದು ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ. ಹೌದು ತಾಲ್ಲೂಕಿನ ಎರಡನೇ ಅತಿದೊಡ್ಡ ಕೆರೆಯಾಗಿರುವ ಮುತ್ತಾನಲ್ಲೂರಿನ ಅಮಾನಿ ಕೆರೆಗೆ ಕಾರ್ಖಾನೆಗಳ, ಆಸ್ಪತ್ರೆಗಳ ಹಾಗೂ ಪುರಸಭೆ, ನಗರಸಭೆಗಳ ಕಲುಷಿತ ತ್ಯಾಜ್ಯ ನೀರು ಸೇರುತ್ತಿದೆ. ಹೀಗಾಗಿ ಕೆರೆಯನ್ನ ಉಳಿಸಿಕೊಡಿ ಎಂದು ಸಾವಿರಾರು ಸಂಖ್ಯೆಯ ಗ್ರಾಮಸ್ಥರು ಪಕ್ಷ ಭೇದ ಮರೆತು ಭಿತ್ತಿಪತ್ರಗಳನ್ನ ಹಿಡಿದುಕೊಂಡು ಸುಮಾರು 12 ಕಿಮೀಗೂ ಹೆಚ್ಚು ದೂರ ಪ್ರತಿಭಟನಾ ಜಾಥಾವನ್ನ ನಡೆಸಿದರು.
ಮುತ್ತಾನಲ್ಲೂರು ಅಮಾನಿ ಕೆರೆಯು ಸುತ್ತಮುತ್ತಲಿನ ಏಳು ಊರುಗಳಿಗೆ ಒಳಪಡುವ ಕೆರೆಯಾಗಿದೆ. ಕೆರೆ ಮಲಿನವಾಗುತ್ತಿರುವ ಬಗ್ಗೆ ಗ್ರಾಮಸ್ಥರು ಹತ್ತಾರು ವರ್ಷಗಳಿಂದ ಮಾಲಿನ್ಯ ಮಂಡಳಿ ಅಧಿಕಾರಿಗಳಿಗೆ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳ ಗಮನಕ್ಕೆ ತಂದ್ರು ಸಹ ಯಾವುದೇ ಪ್ರಯೋಜನವಾಗಿಲ್ಲ..
ಒಟ್ನಲ್ಲಿ ಒಂದು ಕಾಲದಲ್ಲಿ ಸುತ್ತಮುತ್ತಲಿನ ಗ್ರಾಮದ ಜನರ ಜೀವನಾಧಾರವಾಗಿದ್ದ ಮುತ್ತಾನಲ್ಲೂರು ಕೆರೆ ಕಲುಷಿತಗೊಂಡು ಬಾರಿ ಸಮಸ್ಯೆ ಎದುರಾಗಿದೆ. ಇನ್ನಾದ್ರು ಸಂಬಂಧ ಪಟ್ಟ ಅಧಿಕಾರಿಗಳು ಕಲುಷಿತಗೊಂಡಿರುವ ಕೆರೆಗೆ ಮರುಜೀವ ನೀಡುವಲ್ಲಿ ಕ್ರಮವಹಿಸುತ್ತಾರಾ ಕಾದು ನೋಡಬೇಕಿದೆ.
ಹರೀಶ್ ಗೌತಮನಂದ ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
02/07/2022 08:11 pm