ಆನೇಕಲ್ : ರಾಜಸ್ಥಾನದ ಉದಯಪುರದಲ್ಲಿ ನಡೆದ ಟೈಲರ್ ಕನ್ನಯ್ಯಾ ಲಾಲ್ ಅವರ ಭೀಕರ ಹತ್ಯೆಯನ್ನು ಖಂಡಿಸಿ ಆನೇಕಲ್ ತಾಲ್ಲೂಕಿನ ಸರ್ಜಾಪುರದಲ್ಲಿ ಹಿಂದೂ ಕಾರ್ಯಕರ್ತರು ಸರ್ಜಾಪುರ ವೃತ್ತ ಬಳಿ ಮಾನವ ಸರಪಳಿ ರಚಿಸಿ, ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭ ಹಿಂದೂ ಕಾರ್ಯಕರ್ತ ಸರ್ಜಾಪುರ ಭರತ್ ಗೌಡ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಹಿಂದೂಗಳ ಮೇಲೆ ಪ್ರತಿನಿತ್ಯ ಹಲ್ಲೆ, ಕೊಲೆಗಳು ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಾದರೆ ದೇಶದಲ್ಲಿ ಕಾನೂನುಗಳನ್ನು ಬಿಗಿ ಗೊಳಿಸಬೇಕು.
ರಾಜಸ್ಥಾನ ಸರ್ಕಾರ ಓಟಿನ ರಾಜಕೀಯ ಬಿಟ್ಟು ಹಿಂದೂ ಟೈಲರ್ ಅವರನ್ನು ಕೊಲೆ ಮಾಡಿದ ಮತಾಂಧರನ್ನು ಕೂಡಲೇ ಗಲ್ಲಿಗೆ ಏರಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದರು.
Kshetra Samachara
01/07/2022 09:23 pm