ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾಟಾಚಾರದ ಗ್ರಾಮಸಭೆ; ಅಧಿಕಾರಿಗಳು ಗೈರು, ಗ್ರಾಮಸ್ಥರು ಗರಂ

ಆನೇಕಲ್: ಜನಸಾಮಾನ್ಯರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸರ್ಕಾರ, ಗ್ರಾಮಸಭೆ ವ್ಯವಸ್ಥೆ ಮಾಡಿಕೊಟ್ಟಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗ್ರಾಮಸಭೆಗಳು ಹಳ್ಳ ಹಿಡಿದಿವೆ. ಕೇವಲ ಬೆರಳೆಣಿಕೆ ಅಧಿಕಾರಿಗಳಷ್ಟೇ ಭಾಗಿಯಾಗುತ್ತಿದ್ದಾರೆ.

ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಬ್ಯಾಗಡದೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವಲಹೊಸಹೊಳ್ಳಿ ಜನತಾ ಕಾಲೋನಿಯಲ್ಲಿ ಮೊದಲ ಸುತ್ತಿನ ಗ್ರಾಮಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.

ಆದರೆ, ಬೆರಳೆಣಿಕೆಯಷ್ಟು ಅಧಿಕಾರಿಗಳು ಮಾತ್ರ ಭಾಗಿಯಾಗಿ ಗ್ರಾಮ ಸಭೆ ಕಾಟಾಚಾರಕ್ಕೆ ನಡೆದಿದೆ ಅಂತ ಗ್ರಾಮಸ್ಥರು ಹಾಗೂ ಸದಸ್ಯರು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು.

ಇನ್ನು, ಈ ಗ್ರಾಮಸಭೆಯಲ್ಲಿ 28 ಇಲಾಖೆಗಳ ಪೈಕಿ 12 ಇಲಾಖೆ ಅಧಿಕಾರಿಗಳು ಮಾತ್ರ ಭಾಗಿಯಾಗಿದ್ದರು. ಇದರಿಂದ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಾಗಿಲ್ಲ. ಇನ್ನು ಈ ಭಾಗದಲ್ಲಿ ಕಸ ವಿಲೇವಾರಿ ಮಾಡಲು 12 ಗುಂಟೆ ಜಾಗವನ್ನು ಸರ್ವೆ ನಂ. 88 ಮಂಜೂರು ಮಾಡಲಾಗಿತ್ತು. ಅದೇ ಜಾಗದಲ್ಲಿ ಬೇರೆಯವರಿಗೆ ಕೊಟ್ಟಿರುವುದು ಗಲಾಟೆಗೆ ಕಾರಣವಾಯಿತು.

- ಹರೀಶ್ ಗೌತಮನಂದ 'ಪಬ್ಲಿಕ್ ನೆಕ್ಸ್ಟ್' ಆನೇಕಲ್

Edited By : Nagesh Gaonkar
Kshetra Samachara

Kshetra Samachara

01/07/2022 08:46 pm

Cinque Terre

3 K

Cinque Terre

0

ಸಂಬಂಧಿತ ಸುದ್ದಿ