ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅಕ್ರಮ ಮನೆ ನಿರ್ಮಾಣ ಆರೋಪ; ಆನೇಕಲ್ ತಹಶೀಲ್ದಾರ್ ಭೇಟಿ, ಎಚ್ಚರಿಕೆ

ಆನೇಕಲ್: ಆಶ್ರಯ ಯೋಜನೆಯಡಿ ಮಂಜೂರಾಗಿದ್ದ ಜಾಗದಲ್ಲಿ ಖಾಸಗಿ ಬಡಾವಣೆ ಮಾಲೀಕರು ಅಕ್ರಮವಾಗಿ ಮನೆಗಳನ್ನು ನಿರ್ಮಾಣ ಮಾಡಿ ಕೊಂಡಿದ್ದಾರೆ ಅಂತ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆನೇಕಲ್ ತಹಶೀಲ್ದಾರ್ ದಿನೇಶ್ ಹಾಗೂ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮೀನಾರಾಯಣ ಸ್ವಾಮಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆನೇಕಲ್ ತಾಲೂಕಿನ ಸರ್ಜಾಪುರ ಹೋಬಳಿಯ ಸರ್ವೆ ನಂ. 438 ಸರ್ಕಾರಿ ಆಶ್ರಯ ಯೋಜನೆ ಅಡಿಯಲ್ಲಿ 3 ಎಕರೆ 21 ಗುಂಟೆ ಜಾಗವನ್ನು 1998ರಲ್ಲಿ ಮಂಜೂರು ಮಾಡಲಾಗಿತ್ತು. ಆ ಜಾಗದಲ್ಲಿ 40 ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರು. ಹಕ್ಕು ಪತ್ರಗಳನ್ನು ಸಹ ನೀಡಿದ್ರು. ಆದರೆ, ಉಳಿಕೆ ಜಮೀನಿನಲ್ಲಿ ಕೆಲವರು ಅಕ್ರಮವಾಗಿ ಮನೆಗಳನ್ನು ಕಟ್ಟಿಕೊಳ್ಳುತ್ತಿದ್ದಾರೆ ಅಂತ ಪಂಚಾಯಿತಿ ಸದಸ್ಯರು ದೂರು ಸಲ್ಲಿಸಿದ್ರು.

ಜೊತೆಗೆ ಕೆಲಸಗಳನ್ನು ನಿಲ್ಲಿಸುವಂತೆ ಸೂಚನೆ ಸಹ ನೀಡಿದರು. ಆದರೂ ಕೆಲವು ವ್ಯಕ್ತಿಗಳು ಕೆಲಸವನ್ನು ಮುಂದುವರಿಸುತ್ತಿರುವುದನ್ನು ಕಂಡು ಕಾನೂನು ಕ್ರಮ ಕೈಗೊಳ್ಳುವುದಾಗಿ ತಹಶೀಲ್ದಾರ್ ದಿನೇಶ್ ಖಡಕ್ ವಾರ್ನಿಂಗ್ ನೀಡಿದರು. ಈ ಸಂದರ್ಭ ಸರ್ಜಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸನ್- ದಿನೇಶ್ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು.

- ಹರೀಶ್ ಗೌತಮನಂದ ʼಪಬ್ಲಿಕ್ ನೆಕ್ಸ್ಟ್ʼ ಆನೇಕಲ್

Edited By : Nagesh Gaonkar
Kshetra Samachara

Kshetra Samachara

30/06/2022 10:46 pm

Cinque Terre

5.8 K

Cinque Terre

0

ಸಂಬಂಧಿತ ಸುದ್ದಿ