ಯಲಹಂಕ: ಬಿಬಿಎಂಪಿ ಮತ್ತು ರಾಜ್ಯ ವಿಧಾನಸಭೆಗೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಹೊಸದಾಗಿ ಮತದಾರರ ಹೆಸರು ಸೇರಿಸುವುದು, ಮನೆ ಖಾಲಿ ಅಥವಾ ಮೃತಪಟ್ಟವರ ಹೆಸರು ಅಳಿಸುವುದರ ಬಗ್ಗೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಯಲಹಂಕ ತಾಲೂಕು ಚುನಾವಣೆ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಮತದಾರರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋದರೆ ಹೊಸ ಪಟ್ಟಿಯಲ್ಲಿ ಸೇರಿಸುವುದು. ವೋಟರ್ ಹೆಲ್ಪ್ಲೈನ್ ಆ್ಯಪ್ ಬಗ್ಗೆ ಮಾಹಿತಿ ನೀಡುವುದು. ಸಾರ್ವಜನಿಕರು ಸೇರ್ಪಡೆ & ಪಟ್ಟಿಯಿಂದ ಹೆಸರು ತೆಗೆಯಲು ಬಂದಾಗ ನಡೆಯುವ ಪ್ರಕ್ರಿಯೆಗಳ ಬಗ್ಗೆ ಸಮಗ್ರ ಚರ್ಚೆ ನಡೆಸಲಾಯಿತು. ಯಲಹಂಕ ತಾಲೂಕು ಚುನಸವಣಾಧಿಕಾರಿಗಳು ಸಹ ಸೂಕ್ತವಾಗಿ ಜನರ ಕುಂದುಕೊರತೆಗಳಿಗೆ ಸ್ಪಂದಿಸುವುದಾಗಿ ತಿಳಿಸಿದ್ದಾರೆ.
Kshetra Samachara
30/06/2022 08:56 pm