ಬೆಂಗಳೂರು: ಭೈರಸಂದ್ರ ಹಾಗೂ ತಿಲಕ್ ನಗರ ವಾರ್ಡ್‌ಗಳ ಅವೈಜ್ಞಾನಿಕ ವಿಂಗಡಣೆ ಖಂಡಿಸಿ ಜಯನಗರ ವಿಧಾನಸಭಾ ಪದ ಕ್ಷೇತ್ರದಲ್ಲಿ ಬೃಹತ್ ಮೌನ ಪ್ರತಿಭಟನೆ ನಡೆಯಿತು.
ಭೈರಸಂದ್ರ ವಾರ್ಡ್‌ನ ಉಷಾ ಅಪಾಟ್‌ನ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಆದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ, ಶಾಸಕಿ ಸೌಮ್ಯ ರೆಡ್ಡಿ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ನಾಗರಾಜು, ಬಿಬಿಎಂಪಿ ಕೆ ಮಾಜಿ ಸದಸ್ಯರಾದ ಮೊಹಮ್ಮದ್ ರಿಜ್ವಾನ್, ಒಂದ ಮಂಜುನಾಥ್, ಸಮಿವುಲ್ಲ, ಭೈರಸಂದ್ರ ಎಲ್ ಐಸಿ ಕಾಲೋನಿ ವೆಲ್‌ಫೇರ್ ಆಸೋಸಿಯೇಷನ್ ಅಧ್ಯಕ್ಷ ಬಾಬುರಾವ್ ಮತ್ತಿತರ ಸಂಘಸಂಸ್ಥೆಗಳ ಹತ್ತಿರ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ ಬಿಬಿಎಂಪಿಯನ್ನು 243 ವಾರ್ಡ್‌ಗಳಾಗಿ ವಿಂಗಡಣೆ ಮಾಡಲಾಗಿದೆ. ಆದರೆ ಬಿಜೆಪಿ ಮುಖಂಡರ ಮಾತು ಕೇಳಿಕೊಂಡು ಗಾರೆಡ್ಡಿ, ಅಸಮರ್ಪಕವಾರ್ಡ್ ವಿಂಗಡಣೆಮಾಡಲಾಗಿದೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತ ಸಮುದಾಯ ಟಾರ್ಗೆಟ್:
ಕ್ಷೇತ್ರದಲ್ಲಿ ಎಲ್ಲ ಧರ್ಮ, ಜಾತಿಯವರು ಒಂದಾಗಿದ್ದೇವೆ. ಆದರೆ ಬಿಜೆಪಿ ಸರ್ಕಾರ ಅಲ್ಪಸಂಖ್ಯಾತ ಸಮುದಾಯವನ್ನು ಟಾರ್ಗೆಟ್ ಮಾಡುತ್ತಿದೆ ಎಂದು ದೂರಿದರು.
ಕಾಂಗ್ರೆಸ್ ಶಾಸಕರ ಕ್ಷೇತ್ರದ ವಾರ್ಡ್ ಗಳ ಸಂಖ್ಯೆ ಕಡಿಮೆ:
ವಾರ್ಡ್ ಕಚೇರಿ ಮತ್ತು ಮತದಾನ ಕೇಂದ್ರ ಹತ್ತಿರ ಇರುವ ವಾರ್ಡ್‌ಗೆ ಸೇರಿಸಬೇಕು. ಆದರೆ 2ಕಿಲೋ ಮೀಟರ್ ದೂರದ ಪಕ್ಕದ ವಾರ್ಡ್ ಗೆ ಸೇರಿಸಲಾಗಿದೆ. ಅದರಲ್ಲೂ ಕಾಂಗ್ರೆಸ್ ಪಕ್ಷದ ಶಾಸಕರು ಇರುವ ಕಡೆ ವಾರ್ಡ್ ಗಳ ಸಂಖ್ಯೆ ಕಡಿಮೆ ಮಾಡಿದ್ದಾರೆ ಎಂದರು.
ಸಲಹೆ ಪಡೆಯದೆ ಅವೈಜ್ಞಾನಿಕ ವಾರ್ಡ್ ವಿಂಗಡಣೆ:
ನನ್ನ ಸಲಹೆ ಪಡೆಯದೆ ಮಾಡ ಲಾಗಿರುವ ವಾರ್ಡ್ ವಿಂಗಡಣೆ ಅವೈಜ್ಞಾನಿಕವಾಗಿದ್ದು, ಈ ಕುರಿತು ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ಹೇಳಿದರು.
ಬಿಜೆಪಿ ಸರ್ಕಾರ ವೈಯಕ್ತಿಕ ಹಿತಾಸಕ್ತಿ:
ಆಡಳಿತ ಪಕ್ಷದ ಮಾಜಿ ನಾಯಕ ಎನ್.ನಾಗರಾಜು ಮಾತನಾಡಿ, ಬಿಜೆಪಿ ಸರ್ಕಾರ ವೈಯಕ್ತಿಕ ಹಿತಾಸಕ್ತಿಯ ದುರುದ್ದೇಶದಿಂದ ಭೈರಸಂದ್ರ ವಾಡ್ ನಲ್ಲಿರುವ 80 ಅಡಿ ಭಾಗದಷ್ಟು ಪ್ರದೇಶವನ್ನು 2 ಕಿಲೋ ಮೀಟರ್ ದೂರದಲ್ಲಿರುವ ಪಕ್ಕದ ವಾರ್ಡ್‌ಗೆ ಸೇರಿಸುವ ಮೂಲಕ ವಿಂಗಡಣೆ ಮಾಡಿದ್ದಾರೆ ಎಂದು ದೂರಿದರು.
ವಿಧಾನಸೌಧದ ಮುಂಭಾಗ ಪ್ರತಿಭಟನೆಯ ಎಚ್ಚರಿಕೆ:
ವೈಜ್ಞಾನಿಕವಾಗಿ ವಾರ್ಡ್ ವಿಂಗಡಣೆ ಮಾಡಿ ಮತದಾರರಿಗೆ ನ್ಯಾಯ ಒದಗಿಸಬೇಕು ಎಂದು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಮನವಿ ಮಾಡಲಾಗುವುದು. ಒಂದು ವೇಳೆ ನ್ಯಾಯ ಯಕ ಸಿಗದಿದ್ದರೆ ವಿಧಾನಸೌಧದ ಮುಂಭಾಗ ಬಿಜೆಪಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
Kshetra Samachara
29/06/2022 10:27 pm